ತುಳು ಆಚರಣೆಗಳ ವೈಜ್ಞಾನಿಕ ಮಾಹಿತಿಯನ್ನು ಯುವಜನತೆ ತಿಳಿಯಬೇಕು-ಚಂದ್ರಶೇಖರ ಸುವರ್ಣ

ಮೂಲ್ಕಿ: ಸಂಪ್ರದಾಯದ ರೂಪದಲ್ಲಿ ಜೀವನದ ಒಳಿತಿಗಾಗಿ ನಮ್ಮ ಹಿರಿಯರು ಬಳುವಳಿಯಾಗಿ ನೀಡಿದ ಔಷಧೀಯ ಗುಣ ಮೌಲ್ಯಗಳ ವೈಜ್ಞಾನಿಕ ಮಾಹಿತಿಯನ್ನು ಯುವಜನತೆಗೆ ತಿಳಿಸುವ ಕಾರ್ಯ ನಡೆಯಬೇಕು ಎಂದು ಹಿರಿಯ ರಂಗಕರ್ಮಿ ಮೂಲ್ಕಿ ಸುವರ್ಣ ಆಟ್ರ್ಸ್‍ನ ಚಂದ್ರಶೇಖರ ಸುವರ್ಣ ಹೇಳಿದರು.

ಮೂಲ್ಕಿ ಬಸ್ಸು ನಿಲ್ದಾಣದಲ್ಲಿ ಗುರುವಾರ ಮುಂಜಾವ ಆಟಿ ಅಮವಾಸ್ಯೆಯ ಪ್ರಯುಕ್ತ ಉಚಿತವಾಗಿ ಹಾಲೆ ಮರದ ಕಷಾಯ ಹಾಗೂ ಮೆಂತೆ ಗಂಜಿ ವಿತರಣಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾಹಿತಿ ನೀಡಿದರು.

ಹಾಲೆ ಕಷಾಯ ಮತ್ತು ಮೆಂತೆ ಗಂಜಿ ವಿತರಣೆ ಶ್ಲಾಘನೀಯ ಕಾರ್ಯ. ಮರೆತು ಹೋಗಲಿರುವ ಇವುಗಳ ಕಲಿಕೆಯನ್ನು ಯುವಜನತೆ ಮುಂದುವರಿಸಬೇಕು ಎಂದವರು ಹೇಳಿದರು.

ಮೂಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ವೆಂಕಟೇಶ್ ಹೆಬ್ಬಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮೂಲ್ಕಿ ಲಯನ್ಸ್ ಮತ್ತು ಲಿಯೋ ಕ್ಲಬ್, ಯುವವಾಹಿನಿ ಮೂಲ್ಕಿ ಘಟಕ, ಶ್ರೀ ನವದುರ್ಗಾ ಯುವಕ ವೃಂದ ಕೋಟೆಕೇರಿ ಮೂಲ್ಕಿ ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭ ಲಯನ್ಸ್ ಕಾರ್ಯದರ್ಶಿ ವಿನೋದ್ ಸಾಲ್ಯಾನ್ ಬೆಳ್ಳಾಯರು, ಕೋಶಾಧಿಕಾರಿ ಪ್ರಬೋದ್ ಕುಡ್ವ, ಯುವವಾಹಿನಿ ಮೂಲ್ಕಿ ಘಟಕದ ಅಧ್ಯಕ್ಷ ಸತೀಶ್ ಕಿಲ್ಪಾಡಿ, ಕಾರ್ಯದರ್ಶಿ ಭರತೇಶ್ ಮಟ್ಟು, ಉಪಾಧ್ಯಕ್ಷ ದಿವಾಕರ ಕೋಟ್ಯಾನ್, ನವದುರ್ಗಾ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷ ಸತೀಶ್ ಅಂಚನ್, ಜಯ ಸಿ.ಪೂಜಾರಿ, ಸುರೇಶ್ ಶೇರಿಗಾರ್, ಧೀರಜ್, ಉದಯ ಅಮೀನ್ ಮಟ್ಟು, ಕಿಶೋರ್ ಪಂಡಿತ್ ಮಟ್ಟು, ರವೀಂದ್ರ ಶೆಟ್ಟಿ, ಸುಜಿತ್ ಸಾಲ್ಯಾನ್, ಶೋಭಾ ಸುಜಿತ್, ಕಿಶೋರ್ ಶೆಟ್ಟಿ ಬಪ್ಪನಾಡುಗುತ್ತು, ಉದಯ ಶೆಟ್ಟಿ, ಅಬ್ದುಲ್ ರಜಾಕ್, ಪ್ರವೀಣ್ ಕೋಟ್ಯಾನ್, ರಾಮಚಂದ್ರ ಕೋಟ್ಯಾನ್, ಭಾಸ್ಕರ ಕೊಕ್ರಾಣಿ ಉಪಸ್ಥಿತರಿದ್ದರು.

ಸುಮಾರು 60 ಲೀಟರ್ ಹಾಲೆ ಕಷಾಯ ಹಾಗೂ ಮೆಂತೆ ಗಂಜಿಯನ್ನು 600 ಕ್ಕೂ ಅಧಿಕ ಸಾರ್ವಜನಿಕರು ಪಡೆದುಕೊಂಡರು.

ಫೋಟೋ:
ಕ್ಯಾ: ಮೂಲ್ಕಿ ಲಯನ್ಸ್ ಅಧ್ಯಕ್ಷ ಲಯನ್ಸ್ ಕ್ಲಬ್ ವೆಂಕಟೇಶ್ ಹೆಬ್ಬಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.