ತರಂಗಿಣಿ ಮಿತ್ರ ಮಂಡಳಿಯ ವತಿಯಿಂದ ಸನ್ಮಾನ

ಪಡುಬಿದ್ರಿ ಮಧ್ವನಗರದ ತರಂಗಿಣಿ ಮಿತ್ರ ಮಂಡಳಿಯ ವತಿಯಿಂದ ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲದ ಪ್ರಾಂಗಣದಲ್ಲಿ ಸೆ. 22ರಂದು ಜರಗಿದ ಯಕ್ಷಗಾನ ಪ್ರದರ್ಶನದ ಸಂದರ್ಭದಲ್ಲಿ ತೆಂಕು ತಿಟ್ಟಿನ ಹೆಸರಾಂತ ಯಕ್ಷಗಾನ ಕಲಾವಿದ ಕಾಸರಗೋಡು ಸುಬ್ರಾಯ ಹೊಳ್ಳ, ಚೆಂಡೆ ವಾದಕ ಪದ್ಮನಾಭ ಭಟ್, ಪರಂಪರೆಯ ಬಲಿಪ ಭಾಗವತರ ಕೊಂಡಿಯಾಗಿರುವ ಪ್ರಸಾದ್ ಭಟ್ ಬಲಿಪ ಅವರನ್ನು ವೈದಿಕ ವಿದ್ವಾಂಸರಾದ ಕುಡುಪು ನರಸಿಂಹ ತಂತ್ರಿ, ಕಾವೂರು ಶ್ರೀನಿವಾಸ ಭಟ್, ಬೆಳ್ಮಣ್ಣು ಶ್ರೀಧರ ಭಟ್ ಸನ್ಮಾನಿಸಿದರು. ಸ್ಥಳೀಯರಾದ ವಿದ್ಯುತ್ ಗುತ್ತಿಗೆದಾರ ಉದಯ ಕುಮಾರ್ ಶೆಟ್ಟಿ, ಕೃಷಿಕ, ಮರ ಕಡಿವ ಕಾರ್ಮಿಕರಾಗಿ ಸ್ಥಳೀಯರ ಜನಮನ ಗೆದ್ದಿರುವ ಸಾಧು ಪೂಜಾರಿ ಅವರನ್ನು ತರಂಗಿಣಿ ಮಿತ್ರ ಮಂಡಳಿಯ ಹಿರಿಯರು ಸಮ್ಮಾನಿಸಿದರು. ಈ ಸಂದರ್ಭದಲ್ಲಿ ತರಂಗಿಣಿ ಮಿತ್ರ ಮಂಡಳಿಯ ಅಧ್ಯಕ್ಷ ರಮಾಕಾಂತ ರಾವ್, ಕಾರ್ಯದರ್ಶಿ ಮುರುಡಿ ಹರಿಕೃಷ್ಣ ರಾವ್, ಕೋಶಾಧಿಕಾರಿ ರಘುಪತಿ ರಾವ್, ರಾಜೇಶ್ ಉಪಾಧ್ಯಾಯ, ಶೈಲೇಂದ್ರ ಉಪಾಧ್ಯಾಯ, ಅಮರೇಂದ್ರ ಆಚಾರ್ಯ, ಚಂದ್ರಶೇಖರ ರಾವ್ ಮತ್ತಿತರರು ಉಪಸ್ಥಿತರಿದ್ದರು.