ಡಿ7: ಪಡುಬಿದ್ರಿಯಲ್ಲಿ ಹೊನಲು ಬೆಳಕಿನ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್

ಪಡುಬಿದ್ರಿ: ಅವಿಭಜಿತ ದ.ಕ ಮತ್ತು ಉಡುಪಿ ಜಿಲ್ಲೆಯ ಪ್ರತಿಭಾನ್ವಿತ ಬ್ಯಾಡ್ಮಿಂಟನ್ ಆಟಗಾರರನ್ನು ಒಳಗೊಂಡ ಮೂರನೆಯ ಆವೃತ್ತಿಯ ಹೊನಲು ಬೆಳಕಿನ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್-2019 ಪಂದ್ಯಾಟವು ಡಿಸೆಂಬರ್ 7 ಶನಿವಾರ ಸಂಜೆ 7 ಗಂಟೆಗೆ ಸರಿಯಾಗಿ ಕಂಚಿನಡ್ಕದ ಬ್ಯಾಡ್ಮಿಂಟನ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಗುರುವಾರ ಕಾಪು ಪ್ರೆಸ್ ಕ್ಲಬ್‍ನಲ್ಲಿ ಪಂದ್ಯಾಟದ ಸಂಘಟಕರಾದ ಕಂಚಿನಡ್ಕ ಬ್ಯಾಡ್ಮಿಂಟನ್ ಟೀಮ್ ಕರೆದ ಸುದ್ದಿಗೋಷ್ಠಿಯಲ್ಲಿ ಟೀಮ್ ಸದಸ್ಯ ಸಂತೋಷ್ ನಂಬಿಯಾರ್ ಈ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

ಉಡುಪಿ ಜಿಲ್ಲಾಧಿಕಾರಿ ಜಗದೀಶ್, ಎಮ್‍ಆರ್‍ಜಿ ಗ್ರೂಪ್‍ನ ಸಿಎಮ್‍ಡಿ ಪ್ರಕಾಶ್ ಶೆಟ್ಟಿ, ಶಾಸಕರುಗಳಾದ ಲಾಲಾಜಿ ಆರ್.ಮೆಂಡನ್, ರಘುಪತಿ ಭಟ್ ಮತ್ತು ವೇದವ್ಯಾಸ್ ಕಾಮತ್, ಉದ್ಯಮಿಗಳಾದ ಮುನಿಯಾಲು ಉದಯಕುಮಾರ್ ಶೆಟ್ಟಿ, ಸುರೇಶ್ ಶೆಟ್ಟಿ ಗುರ್ಮೆ, ಮಟ್ಟಾರು ರತ್ನಾಕರ ಹೆಗ್ಡೆ, ಶರತ್ ಶೆಟ್ಟಿ ಪಡುಬಿದ್ರಿ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಕಾರ್ಯದರ್ಶಿ ವೈ.ಸುದೀರ್ ಕುಮಾರ್ ಸಮಾರಂಭದಲ್ಲಿ ಉಪಸ್ಥಿತರಿರುವರು.

ಈ ಸಮಾರಂಭದಲ್ಲಿ ಪ್ರಮುಖವಾಗಿ ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ಆಟಗಾರರಾದ ಸಂಜಯ್ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಯುವ ಪ್ರತಿಭೆಗಳಿಗೆ ಸದಾ ಪೆÇ್ರೀತ್ಸಾಹಿಗಳಾದ ಗೌತಮ್ ಶೆಟ್ಟಿಯವರನ್ನು ಸನ್ಮಾನಿಸಲಾಗುವುದು.
ಸತತ 2 ವರ್ಷಗಳಿಂದ ಯಶಸ್ವಿಯಾಗಿ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಪಂದ್ಯಾಟವನ್ನು ನಡೆಸಿದೆ. ಮೊದಲನೆಯ ಆವೃತ್ತಿಯಲ್ಲಿ ಪಡುಬಿದ್ರಿಯ ಆಟಗಾರರಿಗೆ ಸೀಮಿತವಾಗಿದ್ದ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಯಶಸ್ವಿಯಾಗಿತ್ತು. ಎರಡನೇ ಆವೃತ್ತಿಯಲ್ಲಿ ಕಾಪು, ಹಳೆಯಂಗಡಿ, ಪಡುಬಿದ್ರಿ ಭಾಗದ ಆಟಗಾರರ ಸೀಮಿತವಾದ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ನಿರೀಕ್ಷೆಗೂ ಮೀರಿದ ಯಶಸ್ಸು ಗಳಿಸಿತ್ತು.

ಈ ಭಾರಿ ಮೂರನೇ ಆವೃತ್ತಿಗೆ ಅವಿಭಜಿತ ದ.ಕ ಮತ್ತು ಉಡುಪಿ ಜಿಲ್ಲೆಯ ಆಟಗಾರರಿಗಾಗಿ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್-2019 ಆಯೋಜಿಸಲಾಗಿದೆ.

10 ತಂಡಗಳಿಗೆ 10 ಮಾಲಕರನ್ನು ಅಧಿಕೃತಗೊಳಿಸಿ ಪ್ರತಿಭಾನ್ವಿತ 70 ಆಟಗಾರಿಗೆ ಅವಕಾಶ ಕಲ್ಪಿಸಿ, ಅವರವರ ಪ್ರತಿಭೆ ಅನುಸಾರವಾಗಿ ಗ್ರೇಡ್ ರೀತಿಯಲ್ಲಿ ಬಿಡ್ಡಿಂಗ್ ಮೂಲಕ ಆಟಗಾರರ ಹಂಚಿಕೆ ನಡೆಸಲಾಗಿದೆ.
ಪಂದ್ಯಾಟದಲ್ಲಿ ವೈ.ಸುಧೀರ್ ಕುಮಾರ್ ಮಾಲಿಕತ್ವದ ನವರಂಗ್ ವಾರಿಯರ್ಸ್, ಪವನ್ ಪಾದೆಬೆಟ್ಟುರವರ ಎಸ್.ಪಿ.ಎಟೇಕರ್ಸ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟುರವರ ಸ್ಕಂದ ವಾರಿಯರ್ಸ್, ಕೃಷ್ಣ ಬಂಗೇರರ ನಮೋ ವಾರಿಯರ್ಸ್, ಪ್ರತೀಕ್ ಕೋಟ್ಯಾನ್‍ರವರ ನಂದಿಕೂರು ಜವನೆರ್, ಪದ್ಮನಾಭರವರ ಬನ್ವಿತಾ ಸ್ಮಾಶರ್ಸ್, ಅನ್ಸರ್ ಅಹಮ್ಮದ್‍ರವರ ತಾನಿಯಾ ರೆಡ್ ರಾಕರ್ಸ್, ಶಂಕರ್ ಪಡುಬಿದ್ರಿಯವರ ಯಶ್ ವಾರಿಯರ್ಸ್, ಅಶೋಕ್ ಶೆಟ್ಟಿ ಬೆಂಗಳೂರುರವರ ಶೆಟ್ಟಿ ಫೈಟರ್ಸ್, ಪ್ರಶಾಂತ್ ಎರ್ಮಾಳ್‍ರವರ ಎಸ್.ಎನ್.ಜಿ. ರಾಯಲ್ಸ್ ತಂಡಗಳು ಭಾಗವಹಿಸಿವೆ.

ಪ್ರಮುಖವಾಗಿ ಈ ಭಾರಿ ರಾಷ್ಟ ಮಟ್ಟದ ಬ್ಯಾಡ್ಮಿಂಟನ್ ಆಟಗಾರರಾದ ಸಂಜಯ್, ಮಲೇಷ್ಯಾದಲ್ಲಿ ನಡೆಯುತ್ತಿರುವ ಸ್ಟೂಡೆಂಟ್ಸ್ ಏಷ್ಯಾನ್ ಗೇಮ್ಸ್‍ಗೆ ಆಯ್ಕೆಗೊಂಡಿರುವ ಉಜಿರೆ ಎಸ್.ಡಿ.ಎಮ್. ಕಾಲೇಜಿನ ವಿದ್ಯಾರ್ಥಿ ವಿನಯ್ ಡಿ.ಆರ್., ಪ್ರತಿಭಾನ್ವಿತ ಆಟಗಾರರಾದ ಮನೀಶ್, ಮಿನ್ನ ಪಡುಬಿದ್ರಿ, ಮನೋಜ್ ಹೆಜಮಾಡಿ, ಶಿವ ಬೆಳ್ತಂಗಡಿ, ಅಜಯ್ ಶೆಟ್ಟಿ, ಪ್ರಣಮ್ ಬೆಂಗಳೂರು, ಅಶ್ರಪ್ ಪಡುಬಿದ್ರಿ, ಪ್ರದೀಪ್ ಭಟ್ 10 ತಂಡಗಳ ಐಕಾನ್ ಆಟಗಾರರಾಗಿದ್ದಾರೆ.

ಪಂದ್ಯಾಟದಲ್ಲಿ ವಿಜೇತ ಪ್ರಥಮ ತಂಡಕ್ಕೆ ಕೆ.ಬಿ.ಪಿ.ಇಲ್.ಟ್ರೋಫಿ-2019 ಸಹಿತ ನಗದು ರೂ.55,555, ದ್ವಿತೀಯ ಟ್ರೋಫಿ ಸಹಿತ ನಗದು ರೂ.33,333 ಹಾಗೂ ವೈಯಕ್ತಿಕ ಬಹುಮಾನಗಳಿವೆ.

ಸುದ್ದಿಗೋಷ್ಠಿಯಲ್ಲಿ ಕಂಚಿನಡ್ಕ ಬ್ಯಾಡ್ಮಿಂಟನ್ ಟೀಮ್ ಅಧ್ಯಕ್ಷ ಪದ್ಮನಾಭ ಕಂಚಿನಡ್ಕ, ಕಾರ್ಯದರ್ಶಿ ಶಂಕರ್ ಕಂಚಿನಡ್ಕ, ಕೋಶಾಧಿಕಾರಿ ಕೃಷ್ಣ ಬಂಗೇರ, ಗೌರವ ಸಲಹೆಗಾರ ತಾರಾನಾಥ ಎಸ್.ಅಮೀನ್, ಸದಸ್ಯ ನಾಗೇಶ್ ಉಪಸ್ಥಿತರಿದ್ದರು.