ಡಿ.5: ಪಡುಬಿದ್ರಿ ಅಶ್ವತ್ಥಕಟ್ಟೆ ಸಾರ್ವಜನಿಕ ಶನಿಪೂಜೆ

ಪಡುಬಿದ್ರಿ: ಇಲ್ಲಿನ ಅಶ್ವತ್ಥಕಟ್ಟೆ ಶನಿಪೂಜಾ ಸಮಿತಿಯ 22 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಪಡುಬಿದ್ರಿ ಬೋರ್ಡ್ ಶಾಲಾ ಮೈದಾನದ ಬಳಿ ಇರುವ ಅಶ್ವತ್ಥಕಟ್ಟೆಯಲ್ಲಿ ಡಿ.5 ಶನಿವಾರ ಸಾರ್ವಜನಿಕ ಶನಿಪೂಜೆ ನಡೆಯಲಿದೆ.

ಅಂದು ಮಧ್ಯಾಹ್ನ 12.30ರಿಂದ ಸಾರ್ವಜನಿಕ ಅನ್ಮಸಂತರ್ಪಣೆ,ಸಂಜೆ 3 ಗಂಟೆಯಿಂದ ಶನಿಪೂಜೆ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ವಿಶುಕುಮಾರ್ ಶೆಟ್ಟಿಬಾಲ್,ಕಾರ್ಯದರ್ಶಿ ಸುನಿಲ್ ಕೆ.ತಿಳಿಸಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 11 ಗಂಟೆಗೆ ಭಜನೆ,ಸಂಜೆ 3 ಗಂಟೆಯಿಂದ ಶನೀಶ್ವರ ಮಹಾತ್ಮೆ ಯಕ್ಷಗಾನ ತಾಳಮದ್ದಳೆ,ರಾತ್ರಿ 9.30ರಿಂದ ಗಂಗೆ ತೀರ್ಥ ಪಾಡ್ದನ ಆಧಾರಿತ ತುಳು ಯಕ್ಷಗಾನ ಬಯಲಾಟ ನಡೆಯಲಿದೆ.