ಡಿ.31 ಮತ್ತು ಜ.1: ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸ್ವರ್ಣ ಪ್ರಶ್ನೆ

ಪಡುಬಿದ್ರಿ: ಇಲ್ಲಿಗೆ ಸಮೀಪದ ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಗ್ರಾಮಸ್ಥರ ಹಾಗೂ ಆಡಳಿತ ಮಂಡಳಿಯ ಸಭೆಯ ನಿರ್ಣಯದಂತೆ ಡಿಸೆಂಬರ್ 31 ಸೋಮವಾರ ಮತ್ತು ಜನವರಿ ಒಂದು ಮಂಗಳವಾರ ಸ್ವರ್ಣಪ್ರಶ್ನೆ ಇಡಲಾಗುವುದು.
ಕೇರಳದ ಪ್ರಸಿದ್ಧ ಪುದುವಾಳರಾದ ಕೈಮುಕ್ ನಾರಾಯಣ ನಂಬೂದಿರಿ ಇವರಿಂದ ಸ್ವರ್ಣ ಅಷ್ಟಮಂಗಳ ಪ್ರಶ್ನೆ ಇಡಲು ನಿರ್ಧರಿಸಲಾಗಿದೆ.

ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಸಕ್ರಿಯ ಭಾಗವಹಿಸುವಂತೆ ದೇವಳದ ಆಡಳಿತ ಮೊಕ್ತೇಸರ ದಯಾನಂದ ಹೆಜಮಾಡಿ ವಿಂತಿಸಿದ್ದಾರೆ.