ಡಿ.23: ಪಡುಬಿದ್ರಿಯಲ್ಲಿ ರಕ್ತದಾನ ಶಿಬಿರ, ಕ್ರಿಕೆಟ್ ಪಂದ್ಯಾಟ ಆರಂಭ

ಪಡುಬಿದ್ರಿ: ಇಲ್ಲಿನ ಬೋರ್ಡ್ ಶಾಲಾ ಮೈದಾನದಲ್ಲಿ ಡಿಸೆಂಬರ್ 23 ಭಾನುವಾರ ಕಂಚಿನಡ್ಕ ಆಪತ್ಭಾಂಧವ ಫ್ರೆಂಡ್ಸ್ ವತಿಯಿಂದ 2 ದಿನಗಳ ಕ್ರಿಕೆಟ್ ಪಂದ್ಯಾಟ ಮತ್ತು ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ.
ಕರ್ನಾಟಕ ಬ್ಲಡ್ ಹೆಲ್ಪ್‍ಕೇರ್ ಮತ್ತು ದೇರಳಕಟ್ಟೆ ಯೇನಪೋಯ ಆಸ್ಪತ್ರೆ ಸಹಯೋಗದೊಂದಿಗೆ ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ರಕ್ತದಾನ ಶಿಬಿರ ನಡೆಯಲಿದ್ದು,ಕರಾವೇ ಉಡುಪಿ ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್ ಶಿಬಿರ ಉದ್ಘಾಟಿಸುವರು.

ಡಿ23 ಭಾನುವಾರ ಮತ್ತು ಡಿ.25 ಮಂಗಳವಾರ ಎರಡು ದಿನಗಳ ಕಾಲ ಬೋರ್ಡ್‍ಶಾಲಾ ಮೈದಾನದಲ್ಲಿ ಸ್ಥಳೀಯ ಮತ್ತು ರಾಜ್ಯಮಟ್ಟದ ಟೆನಿಸ್‍ಬಾಲ್ ಕ್ರಿಕೆಟ್ ಪಂದ್ಯಾಟ ನಡೆಯಲಿದ್ದು,ವಿಜೇತರಿಗೆ ಮಂಗಳವಾರ ಸಂಜೆ ನಡೆಯುವ ಸಮಾರಂಭದಲ್ಲಿ ಕಾಪು ಬಿಜೆಪಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು,ಶಾಸಕ ಲಾಲಾಜಿ ಆರ್.ಮೆಂಡನ್,ಮುನಿಯಾಲು ಉದಯಕುಮಾರ್ ಶೆಟ್ಟಿ ಮತ್ತಿತರ ಗಣ್ಯರು ಬಹುಮಾನ ವಿತರಿಸಲಿರುವರು.

ವಿಜೇತರಿಗೆ ಪ್ರಥಮ ಆಪತ್ಭಾಂಧವ ಟ್ರೋಫಿ-2018ರ ಸಹಿತ ನಗದು ರೂ.50 ಸಾವಿರ,ದ್ವಿತೀಯ ಟ್ರೋಫಿ ಸಹಿತ ನಗದು ರೂ.30 ಸಾವಿರ ನೀಡಲಾಗುವುದು ಎಂದು ಸಂಘಟಕ ಆಸಿಫ್ ಮೊಹಮ್ಮದ್ ತಿಳಿಸಿದ್ದಾರೆ.