ಡಿ.15:ಪಡುಬಿದ್ರಿ ಕರಾವಳಿ ಮೊಗವೀರ ಯುವ ಸಂಂಘಟನೆ ಉದ್ಘಾಟನೆ

ಅವಿಭಜಿತ ದಕ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ

ಪಡುಬಿದ್ರಿ:: ಪಡುಬಿದ್ರಿ ಗ್ರಾಪಂ ವ್ಯಾಪ್ತಿಯ ಕಾಡಿಪಟ್ಣ ಮತ್ತು ನಡಿಪಟ್ಣ ಮೊಗವೀರ ಸಭಾ ವ್ಯಾಪ್ತಿಯ ಸುಮಾರು 210 ಕುಟುಂಬಗಳ ಕ್ರಿಯಾಶೀಲ ಯುವಕರು ಒಗ್ಗೂಡಿ ಗ್ರಾಮಾಭಿವೃದ್ಧಿಯ ಉದ್ದೇಶದಿಂದ ಆರಂಭಿಸಿರುವ “ಪಡುಬಿದ್ರಿ ಕರಾವಳಿ ಮೊಗವೀರ ಯುವ ಸಂಘಟನೆ”ಯು ಡಿಸೆಂಬರ್ 15 ಭಾನುವಾರ ಉದ್ಘಾಟನೆಗೊಳ್ಳಲಿದೆ.
ಸಂಜೆ 5 ಗಂಟೆಗೆ ಪಡುಬಿದ್ರಿ ಬೀಚ್‍ನಲ್ಲಿ ನಡೆಯುವ ಸಮಾರಂಭದಲ್ಲಿ “ಪಡುಬಿದ್ರಿ ಕರಾವಳಿ ಮೊಗವೀರ ಯುವ ಸಂಘಟನೆ”ಯನ್ನು ಶಾಸಕ ಲಾಲಾಜಿ.ಆರ್.ಮೆಂಡನ್ ಅಧ್ಯಕ್ಷತೆಯಲ್ಲಿ ಮಲ್ಪೆ ಉದ್ಯಮಿ ಸಾಧು ಸಾಲ್ಯಾನ್ ಉದ್ಘಾಟಿಸಲಿದ್ದಾರೆ.

ಸಂಘದ ಸಾಮಾಜಿಕ ಸೇವೆಗಾಗಿ ಚಾರಿಟೇಬಲ್ ಟ್ರಸ್ಟ್ ಆರಂಭಿಸಲಿದ್ದು, ಸಂಪನ್ಮೂಲ ಕ್ರೋಢೀಕರಣ ಉದ್ದೇಶದಿಂದ ಅವಿಭಜಿತ ದಕ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಪುರುಷರ ಕಬಡ್ಡಿ ಪಂದ್ಯಾಟವನ್ನು ಇಧೆ ಸಂದರ್ಭ ನಡೆಸಲಿದ್ದು, ಸಂಘಟನೆಯ ಉದ್ಘಾಟನೆಯೊಂದಿಗೆ ಆರಂಭಗೊಳ್ಳಲಿದೆ.

ಬಳ್ಳಾರಿ ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಪ್ರಧಾನ ಭಾಷಣಗೈಯಲಿದ್ದು, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಜಿಪಂ ಸದಸ್ಯ ಶಶಿಕಾಂತ್ ಪಡುಬಿದ್ರಿ, ತಾಪಂ ಅಧ್ಯಕ್ಷೆ ನೀತಾ ಗುರುರಾಜ್, ಗ್ರಾಪಂ ಅಧ್ಯಕ್ಷೆ ದಮಯಂತಿ ವಿ.ಅಮೀನ್, ಪಡುಬಿದ್ರಿ ಬೀಡು ಅರಸರಾದ ರತ್ನಾಕರರಾಜ್ ಅರಸು ಕಿನ್ಯಕ್ಕ ಬಲ್ಲಾಳರು, ಸಾಯಿರಾಧಾ ಗ್ರೂಪ್ಸ್ ಸಿಎಮ್‍ಡಿ ಮನೋಹರ ಶೆಟ್ಟಿ, ಉದ್ಯಮಿ ಮುನಿಯಾಲು ಉದಯಕುಮಾರ್ ಶೆಟ್ಟಿ, ಬಿಜೆಪಿ ಕಾಪು ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಜಿಲ್ಲಾ ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ಕಾಪು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ನವೀನ್‍ಚಂದ್ರ ಜೆ.ಶೆಟ್ಟಿ, ಕಾಡಿಪಟ್ಣ-ನಡಿಪಟ್ಣ ವಿದ್ಯಾಪ್ರಚಾರಕ ಸಂಘದ ಅಧ್ಯಕ್ಷ ಸುಕುಮಾರ್ ಶ್ರೀಯಾನ್, ಕಾಡಿಪಟ್ಣ ಮೊಗವೀರ ಸಭಾ ಅಧ್ಯಕ್ಷ ಲೀಲಾಧರ ಸಾಲ್ಯಾನ್, ನಡಿಪಟ್ಣ ಮೊಗವೀರ ಸಭಾ ಅಧ್ಯಕ್ಷ ವಿಶ್ವನಾಥ ಕರ್ಕೇರ, ಗ್ರಾಪಂ ಸಸ್ಯರಾದ ಸೇವಂತಿ ಸದಾಶಿವ್ ಮತ್ತು ಅಶೋಕ್ ಸಾಲ್ಯಾನ್ ಮುಖ್ಯ ಅತಿಥಿಗಳಾಗಿರುವರು. ಹಾಗೂ ಕನ್ನಡ-ತುಳು ಚಿತ್ರರಂಗದ ಖ್ಯಾತ ನಟ ನಟಿಯರು ಭಾಗವಹಿಸಲಿರುವರು.

ಉಚಿತ ಅಂಬುಲೆನ್ಸ್ ಸೇವೆ: ಸಂಘಟನೆ ವತಿಯಿಂದ ಪಡುಬಿದ್ರಿಯಲ್ಲಿ ಉಚಿತ ಅಂಬುಲೆನ್ಸ್ ಸೇವೆ ಪ್ರಾರಂಬಿಸಲಿದ್ದು, ಸಮಾರಂಭದಲ್ಲಿ ಅತಿಥಿಗಳು ನೂತನ ಅಂಬುಲೆನ್ಸ್ ಲೋಕಾರ್ಪಣೆಗೊಳಿಸುವರು.

ಸನ್ಮಾನ: ಇದೇ ಸಂದರ್ಭ ಪಡುಬಿದ್ರಿ ಗ್ರಾಮ ವ್ಯಾಪ್ತಿಯ ಸಾಧಕ ಹಿರಿಯರನ್ನು, ರಾಜಕೀಯ ಸಾಧಕರನ್ನು ಮತ್ತು ರಾಷ್ಟ್ರೀಯ ಕಬಡ್ಡಿ ತಂಡಕ್ಕೆ ಆಯ್ಕೆಯಾದ ಪಡುಬಿದ್ರಿ ಸಾಗರ ವಿದ್ಯಾ ಮಂದಿರ ಶಾಲೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದು ಸಂಘಟನೆಯ ಅಧ್ಯಕ್ಷ ವಿಜೇತ್ ಸಾಲ್ಯಾನ್, ಉಪಾಧ್ಯಕ್ಷ ಕೃಷ್ಣ ಕಾಂಚನ್, ಕಾರ್ಯದರ್ಶಿ ಸಾಗರ್ ಕರ್ಕೇರ, ಕೋಶಾಧಿಕಾರಿ ವಿಜೇಶ್ ಕೋಟ್ಯಾನ್ ತಿಳಿಸಿದ್ದಾರೆ.