ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್‍ರಿಗೆ ತುಳು ಜಾನಪದ ಸಂಶೋಧಕ ಪ್ರಶಸ್ತಿ

ಮೂಲ್ಕಿ: ಮುಂಬಾಯಿ- ಮಿರಾ ಬಯಂದರ್ ತುಳುನಾಡ ಸೇವಾ ಸಮಾಜ ಸಂಘದ ವತಿಯಿಂದ ಮೂಲ್ಕಿಯ ಹಿರಿಯ ಸಾಹಿತಿ, ವಿದ್ವಾಂಸ ಡಾ| ಹರಿಶ್ಚಂದ್ರ ಪಿ. ಸಾಲ್ಯಾನ್ ಅವರಿಗೆ ತುಳು ಜಾನಪದ ಸಂಶೋಧಕ ಬಿರುದನ್ನು ನೀಡಿ ಗೌರವಿಸಲಾಯಿತು.

ಮಿರಾ-ಬಯಂದರ್ ಸಾಯಿ ಬಾಬಾ ನಗರದ ಸೈಂಟ್ ಥಾಮಸ್ ಚರ್ಚ್ ಸಭಾಂಗಣದಲ್ಲಿ ಆಯೋಜಿಸಿದ ಪ್ರತಿಭಾ ಪುರಸ್ಕಾರ ಮತ್ತು ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಅವರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಡಾ| ಆರ್.ಕೆ.ಶೆಟ್ಟಿ ಅವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ರಮೇಶ್ ಶೆಟ್ಟಿ ಸಿದ್ದಕಟ್ಟೆ, ದುರ್ಗಾಪ್ರಸಾದ್ ಸಾಲ್ಯಾನ್, ಶ್ರೀಧರ ಮೂಲ್ಯ ಹಾಗೂ ಪದಾಧಿಕಾರಿಗಳಾದ ನಾರಾಯಣ್ ಮೂಡಬಿದಿರೆ, ಶೋಭಾ ವಿ. ಉಡುಪ, ರವೀಂದ್ರ ಶೆಟ್ಟಿ ಸೂಡ, ಅಮಿತ ಎಸ್. ಶೆಟ್ಟಿ, ಜಯಪ್ರಕಾಶ್ ಪೂಜಾರಿ, ಮಂಜುನಾಥ ಬಿ.ಕೆ, ರವಿ ಶೆಟ್ಟಿ ಶ್ರಿಂಗೇರಿ ಮತ್ತು ತುಳುನಾಡ ಸೇವಾ ಸಮಾಜದ ಅಧ್ಯಕ್ಷರಾದ ಡಾ. ರವಿರಾಜ್ ಸುವರ್ಣ ಉಪಸ್ಥಿತರಿದ್ದರು.