ಟಿಪ್ಪು ಜಯಂತಿ ವಿರೋಧಿಸಿ ಹಿಂಜಾವೇಯಿಂದ ಆರ್‍ಐಗೆ ಮನವಿ

ಪಡುಬಿದ್ರಿ: ಟಿಪ್ಪು ಜಯಂತಿ ವಿರೋಧಿಸಿ ಹಾಗೂ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಹಿಂದೂ ಜಾಗರಣ ವೇದಿಕೆ ಕಾಪು ತಾಲೂಕು ಘಟಕದಿಂದ ಕಾಪು ತಾಲೂಕು ಕಂದಾಯ ನಿರೀಕ್ಷ ರವಿಶಂಕರ್ ಅವರಿಗೆ ಬುಧವಾರ ಮನವಿ ಪತ್ರ ಸಲ್ಲಿಸಲಾಯಿತು.
ಸಂಘಟನೆಯ ಉಡುಪಿ ಜಿಲ್ಲಾ ಕಾರ್ಯದರ್ಶಿ ರಾಜೇಶ್ ಉಚ್ಚಿಲ, ಕಾಪು ತಾಲೂಕು ಪ್ರಧಾನ ಕಾರ್ಯದರ್ಶಿ ಯುವರಾಜ್ ಕುಲಾಲ್,ಪಡುಬಿದ್ರಿ ವಲಯ ಅಧ್ಯಕ್ಷ ಪ್ರತೀಕ್ ಕೋಟ್ಯಾನ್ ನಂದಿಕೂರು, ಉಪಾಧ್ಯಕ್ಷ ಸುಹಾಸ್ ಶೆಟ್ಟಿ ನಟವರ್ಯ, ಪಲಿಮಾರು ಘಟಕದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಪಲಿಮಾರ್, ಎಲ್ಲುರು ಘಟಕದ ಅಧ್ಯಕ್ಷ ಕಿರಣ್ ರಾವ್ ಉಪಸ್ಥಿತರಿದ್ದರು.