ಜ.5 ರಂದು ಸಾಮೂಹಿಕ ಶನಿಪೂಜೆ

ಪಡುಬಿದ್ರಿ: ಇಲ್ಲಿನ ಧನ್ವಂತರಿ ರಸ್ತೆ ಅಶ್ವತ್ಥಕಟ್ಟೆ ಶನಿಪೂಜಾ ಸಮಿತಿಯ 22ನೇ ವಾರ್ಷಿಕ ಪೂಜೆಯ ಅಂಗವಾಗಿ ಸಾಮೂಹಿಕ ಶನಿಪೂಜೆ ಜನವರಿ 5 ರಂದು ಬೋರ್ಡ್ ಶಾಲಾ ಮೈದಾನದ ಬಳಿಯಿರುವ ಅಶ್ವತ್ಥಕಟ್ಟೆಯಲ್ಲಿ ಆಯೋಜಿಸಲಾಗಿದೆ.

ಅ ದಿನ ಬೆಳಿಗ್ಗೆ 11 ಗಂಟೆಗೆ ಕಾಡಿಪಟ್ಣ ಶ್ರೀ ವಿಷ್ಣು ಭಜನಾ ಮಂಡಳಿಯಿಂದ ಭಜನೆ, ಮಧ್ಯಾಹ್ನ 3ಗಂಟೆಗೆ ಶನೀಶ್ವರ ಪೂಜಾ ಸಮಿತಿಯವರಿಂದ ಶ್ರೀ ಶನೀಶ್ವರ ಮಹಾತ್ಮೆ ಯಕ್ಷಗಾನ ತಾಳಮದ್ದಲೆ, ರಾತ್ರಿ 8ಕ್ಕೆ ಪ್ರಸಾದ ವಿತರಣೆ, ರಾತ್ರಿ 9.30ರಿಂದ ಪುತ್ತೂರು ನಾಗಬ್ರಹ್ಮ ಮುಗ್ಗೇರ್ಕಳ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ ಗಂಗೇ ತೀರ್ಥ ತುಳು ಯಕ್ಷಗಾನ ಬಯಲಾಟ ನಡೆಯಲಿದೆ.

4 ರಂದು ಸಂಜೆ 5 ಗಂಟೆಯಿಂದ ರಾತ್ರಿ 12 ರವರೆಗೆ ಕಲ್ಲಟ್ಟೆ ಶ್ರೀ ಜಾರಂದಾಯ ಮಹಿಳಾ ಭಜನಾ ಮಂಡಳಿ, ಕಂಚಿನಡ್ಕ ಶ್ರೀ ರಾಘವೇಂದ್ರ ಭಜನಾ ಮಂಡಳಿ, ಪಡುಬಿದ್ರಿ ಲಕ್ಷ್ಮೀ ವೆಂಕಟರಮಣ ಭಜನಾ ಮಂಡಳಿ ಹಾಗೂ ಪಾದೆಬೆಟ್ಟು ಶ್ರೀ ಗಾಯತ್ರಿ ಭಜನಾ ಮಂಡಳಿಯರಿಂದ ಭಜನಾ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.