ಜ.5ಕ್ಕೆ ಕಣ್ಣಂಗಾರು ಶ್ರೀಬ್ರಹ್ಮ ಬೈದರ್ಕಳ ನೇಮೋತ್ಸವ

ಪಡುಬಿದ್ರಿ: ಕಣ್ಣಂಗಾರು ಶ್ರೀಬ್ರಹ್ಮ ಬೈದರ್ಕಳ ಗರೋಡಿಯಲ್ಲಿ ವಾರ್ಷಿಕ ನೇಮೋತ್ಸವ ಜ.4ರಿಂದ ಆರಂಭಗೊಳ್ಳಲಿದ್ದು ಜ.6ಕ್ಕೆ ಸಮಾಪನಗೊಳ್ಳಲಿದೆ.

ವಾರ್ಷಿಕ ನೇಮೋತ್ಸವದ ಅಂಗವಾಗಿ ಜ.4ರ ಬೆಳಿಗ್ಗೆ 7.30ಕ್ಕೆ ನಾಗದೇವರಿಗೆ ತುನು ತಂಬಿಲ, ರಾತ್ರಿ 7ಕ್ಕೆ ಅನ್ನ ನೈವೇದ್ಯ ಅಗೆಲ್ ಸೇವೆ, ಆಬಳಿಕ ದರ್ಶನ ಪ್ರಸಾದ ವಿತರಣೆ, ಜ.5ರ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ಸಾಯಂಕಾಲ 7-30ಕ್ಕೆ ಕೋಟಿ-ಚೆನ್ನಯರು ಕೊಳಲ ಬಾಕಿಮಾರು ಪ್ರವೇಶದೊಂದಿಗೆ ಬ್ರಹ್ಮ ಬೈದರ್ಕಳ ನೇಮೋತ್ಸವ ಆರಂಭ. ಜ.6ರ ಬೆಳಿಗ್ಗೆ ಮಾಯೆಂದಾಲ್ ದೇವಿಯ ನೇಮದೊಂದಿಗೆ ವಾರ್ಷಿಕ ಧಾರ್ಮಿಕ ಕಾರ್ಯಕ್ರಮಕ್ಕೆ ತೆರೆ ಬೀಳಲಿದೆ ಎಂಬುದಾಗಿ ಗರೋಡಿಯ ಸಮಿತಿ ಪ್ರಕಟನೆ ತಿಳಿಸಿದೆ.