ಜ. 18: ಪಡುಬಿದ್ರಿ ಬ್ರಹ್ಮಸ್ಥಾನದಲ್ಲಿ ಢಕ್ಕೆಬಲಿ ಸೇವೆಗಳ ಆರಂಭ

ಜ.18 ರಿಂದ ಮಾ.12 ರವರೆಗೆ ಒಟ್ಟು 35 ಢಕ್ಕೆಬಲಿ ಸೇವೆ

ಪಡುಬಿದ್ರಿ: ಇತಿಹಾಸ ಪ್ರಸಿದ್ಧ ಪಡುಬಿದ್ರಿಯ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ನಡೆಯುವ ದ್ವೈವಾರ್ಷಿಕ ನಡಾವಳಿ ಢಕ್ಕೆಬಲಿ ಸೇವೆಯು ಈ ಬಾರಿ ಜ.18 ರಂದು ಮಂಡಲ ಹಾಕುವ ಢಕ್ಕೆಬಲಿ ಸೇವೆಯೊಂದಿಗೆ ಆರಂಭಗೊಳ್ಳಲಿದೆ.

ಒಂದು ನಾಗಮಂಡಲ ಸೇವೆಯೂ ಸೇರಿದಂತೆ ಒಟ್ಟು 35 ಢಕ್ಕೆಬಲಿ ಸೇವೆಗಳು ಈ ಬಾರಿ ನಡೆಯಲಿದ್ದು,ಈ ಪೈಕಿ ಹೆಜಮಾಡಿ ಬ್ರಹ್ಮಸ್ಥಾನ ಮತ್ತು ಮುರುಡಿ ಬ್ರಹ್ಮಸ್ಥಾನಗಳಲ್ಲಿ ತಲಾ ಒಂದು ಢಕ್ಕೆ ಬಲಿ ನಡೆಯಲಿದೆ.

ಪಡುಬಿದ್ರಿ ಬ್ರಹ್ಮಸ್ಥಾನದಲ್ಲಿ ಮಾ. 12ರಂದು ನಡೆಯುವ ಮಂಡಲ ವಿಸರ್ಜನೆಯ ಸೇವೆಗಳೊಂದಿಗೆ ಇದು ಸಮಾಪನಗೊಳ್ಳಲಿರುವುದಾಗಿ ಶ್ರೀ ಖಡ್ಗೇಶ್ವರೀ ವನದುರ್ಗಾ ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ವೈ.ಎನ್.ರಾಮಚಂದ್ರ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.