ಜ.11: ಪಡುಬಿದ್ರಿ ಕಲ್ಲಟ್ಟೆ ಶ್ರೀ ಜಾರಾಂದಾಯ ನೇಮೋತ್ಸವ

ಪಡುಬಿದ್ರಿ: ಕಲ್ಲಟ್ಟೆ ಶ್ರೀ ಜಾರಂದಾಯ ದೈವಸ್ಥಾನದಲ್ಲಿ ಜನವರಿ 11 ಶುಕ್ರವಾರ ರಾತ್ರಿ ಶ್ರೀ ಜಾರಂದಾಯ ದೈವದ ವಾರ್ಷಿಕ ನೇಮೋತ್ಸವ ನಡೆಯಲಿದೆ.

ಬೆಳಿಗ್ಗೆ 9 ಗಂಟೆಗೆ ಕಲ್ಲಟ್ಟೆಗುತ್ತು ನಾಗಬನದಲ್ಲಿ ಆಶ್ಲೇಷಾ ಬಲಿ ಸೇವೆ,ಬೆಳಿಗ್ಗೆ 10.30 ಗಂಟೆಗೆ ಚಪ್ಪರ ಮುಹೂರ್ತ,ಮಧ್ಯಾಹ್ನ 12 ಗಂಟೆಯಿಂದ ಕಲ್ಲಟ್ಟೆ ಶ್ರೀ ಜಾರಂದಾಯ ಮಹಿಳಾ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ,12.30ರಿಂದ ಅನ್ನಸಂತರ್ಪಣೆ,ಸಂಜೆ 6ಗಂಟೆಗೆ ಭಂಡಾರ ಇಳಿಯುವುದು,ರಾತ್ರಿ 10 ಗಂಟೆಯಿಂದ ಶ್ರೀ ಜಾರಂದಾಯ ನೇಮೋತ್ಸವ,ರಾತ್ರಿ 2 ಗಂಟೆಯಿಂದ ಶ್ರೀ ಜಾರಂದಾಯ ಬಂಟ ದೈವ ಹಾಗೂ ಸಂತೆಕಟ್ಟೆ ಶ್ರೀ ಕೋರ್ದಬ್ಬು ದೈವಗಳ ಭೇಟಿ ಕಾರ್ಯಕ್ರಮ ನಡೆಯಲಿದೆ.