ಜ.1: ಹೆಜಮಾಡಿ ಕೋಡಿಯಲ್ಲಿ ರಕ್ತದಾನ ಶಿಬಿರ, ಸಾಮೂಹಿಕ ಸತ್ಯನಾರಾಯಣ ಪೂಜೆ

ಪಡುಬಿದ್ರಿ: ಹೆಜಮಾಡಿ ಕೋಡಿಯ ಕೋಡಿ ಕ್ರಿಕೆಟರ್ಸ್ ವತಿಯಿಂದ ಲೋಕಕಲ್ಯಾಣಾರ್ಥವಾಗಿ ಹತ್ತನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ, ಬೃಹತ್ ರಕ್ತದಾನ ಶಿಬಿರ ಮತ್ತು ಉಚಿತ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ನೋಂದಣಿ ಶಿಬಿರವು ಜನವರಿ ಒಂದು ಬುಧವಾರ ಹೆಜಮಾಡಿ ಕೋಡಿಯ ವಿದ್ಯಾಪ್ಸಾರ ಹಳೇ ವಿದ್ಯಾರ್ಥಿ ಸಂಘದ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.

ಕೋಡಿ ಕ್ರಿಕೆಟರ್ಸ್, ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್, ಮಣಿಪಾಲ ರಕ್ತನಿಧಿ ಕೇಂದ್ರ ಮತ್ತು ಉಡುಪಿ ಜಿಲ್ಲಾಡಳಿತದ ಸಂಯುಕ್ತ ಸಹಯೋಗದೊಂದಿಗೆ ಬೆಳಿಗ್ಗೆ 8.30ರಿಂದ ಹೆಜಮಾಡಿ ಕೋಡಿ ಮೀನುಗಾರಿಕಾ ಪ್ರೌಢ ಶಾಲೆಯಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ.
ಇದೇ ಸಂದರ್ಭ ಕೋಡಿ ಮೈದಾನದಲ್ಲಿ ಸಾರ್ವಜನಿಕ ಗಣಪತಿ ಹೋಮ, ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ.
ಬೆಳಿಗ್ಗೆ 8.30 ಕ್ಕೆ ಸಾಮೂಹಿಕ ಪ್ರಾರ್ಥನೆ, 9 ಗಂಟೆಗೆ ಗಣಹೋಮ, 10 ಗಂಟೆಗೆ ಸಾಮೂಹಿಕ ಸತ್ಯನಾರಾನ ಪೂಜೆ, 11 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ, 11.30ಕ್ಕೆ ಶ್ರೀ ಶಾರದಾ ಅಂಧರ ಗೀತಗಾಯನ ಕಲಾ ತಂಡದಿಂದ ಭಜನಾ ಕಾರ್ಯಕ್ರಮ, 12.30ರಿಂದ ಅನ್ನ ಸಂತರ್ಪಣೆ, ರಾತ್ರಿ 7ಕ್ಕೆ ಗಿರಿಗಿಟ್ ಗಿರಿಧರೆ ಹಾಸ್ಯ ನಾಟಕ ನಡೆಯಲಿದೆ.