ಜೇಸಿಐ ಪಡುಬಿದ್ರಿ: ಕಡಲೋತ್ಸವ-2019 ಕಛೇರಿ ಉದ್ಘಾಟನೆ

ಪಡುಬಿದ್ರಿ: ಜೇಸಿಐ ಪಡುಬಿದ್ರಿಯ ಆಶ್ರಯದಲ್ಲಿ ಪಡುಬಿದ್ರಿಯ ಬೀಚ್‍ನಲ್ಲಿ ನಡೆಯಲಿರುವ ಜೇಸಿಐ ವಲಯ 15ರ ವಲಯ ಕಾರ್ಯಕ್ರಮ ಕಡಲೋತ್ಸವ-2019ರ ಕಛೇರಿಯನ್ನು ಗುರುವಾರ ವಲಯ ಕಾರ್ಯಕ್ರಮ ನಿರ್ದೇಶಕ ಡಾ.ರಾಘವೇಂದ್ರ ಹೊಳ್ಳ ಉದ್ಘಾಟಿಸಿದರು.

ವಲಯದ ಹಿರಿಯ ಘಟಕದ ಆಶ್ರಯದಲ್ಲಿ ನಡೆಯಲಿರುವ ಕಡಲೋತ್ಸವದ ಮೂಲಕ ಪಡುಬಿದ್ರಿ ಘಟಕವು ಸುವರ್ಣ ಯುಗವನ್ನು ಕಾಣುವಂತಾಗಲಿ.ಜೇಸಿಐ ವಲಯದ ಅತೀ ಹೆಚ್ಚು ಸದಸ್ಯರು ಭಾಗವಹಿಸುವ ಕಡಲೋತ್ಸವವು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭ ಕಡಲೋತ್ಸವ ಕಾರ್ಯಕ್ರಮ ಸಂಯೋಜಕ ಮುರಳೀನಾಥ ಶೆಟ್ಟಿಯವರಿಗೆ ಕಾರ್ಯಕ್ರಮ ಸೂಚಿಯನ್ನು ಹಸ್ತಾಂತರಿಸಿದರು. ಜೇಸಿಐ ಪಡುಬಿದ್ರಿಯ ಅಧ್ಯಕ್ಷ ಅನಿಲ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.

ಜೇಸಿಐ ಇಂಡಿಯಾ ಫೌಂಡೇಶನ್ ನಿರ್ದೇಶಕ ವೈ.ಸುಕುಮಾರ್,ವಲಯ ಉಪಾಧ್ಯಕ್ಷ ಹಾಗೂ ಜೇಸಿಐ ಪಡುಬಿದ್ರಿಯ ನಿಕಟಪೂರ್ವಾಧ್ಯಕ್ಷ ಮಕರಂದ್ ಸಾಲ್ಯಾನ್,ಪೂರ್ವಾಧ್ಯಕ್ಷರುಗಳಾದ ರವಿ ಶೆಟ್ಟಿ,ಶ್ರೀನಿವಾಸ ಶರ್ಮ,ಡಾ.ಮನೋಜ್‍ಕುಮಾರ್ ಶೆಟ್ಟಿ,ಹರೀಶ್ ಕುಮಾರ್ ಹೆಜ್ಮಾಡಿ,ಪೂರ್ವಾಧ್ಯಕ್ಷ ಹಾಗೂ ಕಟ್ಟಡ ಮಾಲೀಕ ಹಾಗೂ ಜಯ ಶೆಟ್ಟಿ ಪದ್ರ,ಜೇಸಿರೆಟ್ ಅಧ್ಯಕ್ಷೆ ಸುಪ್ರಿಯಾ ಅನಿಲ್ ಶೆಟ್ಟಿ,ವಸಂತಿ ರಾಜು ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.

ಅಶ್ವಥ್ ಪಾದೆಬೆಟ್ಟು ಜೇಸೀವಾಣಿ ಉದ್ಘೋಷಿಸಿದರು.ಕಾರ್ಯಕ್ರಮ ಸಂಯೋಜಕ ಮುರಳೀನಾಥ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.ಕಾರ್ಯದರ್ಶಿ ಪ್ರದೀಪ್ ಆಚಾರ್ಯ ವಂದಿಸಿದರು.