ಜೂನ್23 ಮತ್ತು 30: ಪಡುಬಿದ್ರಿಯಲ್ಲಿ ನಮೋ ಟ್ರೋಫಿ-2019

ಜೂನ್23 ಮತ್ತು 30: ಪಡುಬಿದ್ರಿಯಲ್ಲಿ ನಮೋ ಟ್ರೋಫಿ-2019
ಪಡುಬಿದ್ರಿ: ಇಲ್ಲಿನ ತರುಣ್ ಫ್ರೆಂಡ್ಸ್ ಮತ್ತು ಗ್ರೌಂಡ್ ಫ್ರೆಂಡ್ಸ್ ವತಿಯಿಂದ ಜೂನ್ 23 ಮತ್ತು 30ರಂದು ಜಿಲ್ಲಾ ಮತ್ತು ಪಡುಬಿದ್ರಿ, ಹೆಜಮಾಡಿ, ಎರ್ಮಾಳು,ನಂದಿಕೂರು ವಲಯ ಮಟ್ಟದ ಲೀಗ್ ಮತ್ತು ನಾಕೌಟ್ ಕ್ರಿಕೆಟ್ ಪಂದ್ಯಾಟ ನಮೋ ಟ್ರೋಫಿ-2019 ನಡೆಯಲಿದೆ.

ಪಡುಬಿದ್ರಿ ಬೋರ್ಡ್ ಶಾಲಾ ಮೈದಾನದಲ್ಲಿ ನಡೆಯುವ ಪಂದ್ಯಾಟದಲ್ಲಿ ಪ್ರಥಮ ವಿಜೇತರಿಗೆ ನಮೋ ಟ್ರೋಫಿ ಮತ್ತು ನಗದು ರೂ.22,000, ದ್ವಿತೀಯ ಟ್ರೋಫಿ ಮತ್ತು ನಗದು ರೂ.15,000 ಹಾಗೂ ವೈಯಕ್ತಿಕ ಪ್ರಶಸ್ತಿಗಳಿವೆ.