ಜೀವನ್ ಕೆ.ಶೆಟ್ಟಿಯವರಿಗೆ ಚೆನ್ನೈನಲ್ಲಿ ಸನ್ಮಾನ

ಮೂಲ್ಕಿ: ಮೂಲ್ಕಿ ಶಾರದಾ ಇನ್ಫ್ರಾಡಿಸೈನ್ ಪ್ರೈ.ಲಿ.ನ ಸಿಎಮ್‍ಡಿ, ಇಂಜಿನಿಯರ್ ಜೀವನ್ ಕೆ.ಶೆಟ್ಟಿಯವರು ಉದ್ಯಮದಲ್ಲಿ ಸಾಧಿಸಿದ ಸಾಧನೆಗಾಗಿ ಚೆನ್ನೈ ಕರ್ನಾಟಕ ಸಂಘ, ಚೆನ್ನೈ ಬಂಟರ ಸಂಘ ಮತ್ತು ರಾಜ್ಯ ಮೂಲದ ಸಂಘಟನೆಗಳು ಸಂಯುಕ್ತವಾಗಿ ನಡೆಸಿದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ನ.17ರಂದು ಚೆನ್ನೈ ಟಿ ನಗರದ ಡಾ. ಯು.ರಾಮ ರಾವ್ ಸಭಾ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ ಕನ್ನಡದ ಹಿರಿಯ ನಟ ಪ್ರಣಯರಾಜ ಡಾ.ಶ್ರೀನಾಥ್ ಮತ್ತು ಚೆನ್ನೈ ಅಣ್ಣಾ ವಿಶ್ವವಿದ್ಯಾನಿಲಯದ ವೈಸ್ ಚಾನ್ಸಲರ್ ಪ್ರೊ.ಎಮ್.ಕೆ.ಸೂರಪ್ಪನವರು ಪ್ರಶಸ್ತಿ ವಿತರಿಸಿದರು.
ಈ ಸಂದರ್ಭ ರಾಜ್ಯೋತ್ಸವ ಸಮಿತಿಯ ಅಧ್ಯಕ್ಷ ಅಶ್ವಿನ್ ಹೆಗ್ಡೆ, ಕಾರ್ಯದರ್ಶಿ ಮನೋಜ್ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಗಣೇಶ್ ನಾಯಕ್ ಮತ್ತು ಎಮ್. ತುಕೇಶ್ ಶೆಟ್ಟಿ ಉಪಸ್ಥಿತರಿದ್ದರು.