ಜಿಲ್ಲಾ ಮಟ್ಟದ ಸಹಕಾರ ವೈಭವ-2018 ಸ್ಪರ್ಧೆ

ಜಿಲ್ಲಾ ಸಹಕಾರ ವೈಭವ: ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸಂಘ ಪ್ರಥಮ

ಪಡುಬಿದ್ರಿ:ಉಡುಪಿಯ ಬಡಗುಬೆಟ್ಟು ಕ್ರೆಡಿಟ್ ಕೋಪರೇಟಿವ್ ಸೊಸೈಟಿಯ ಶತಮಾನೋತ್ಸವ ಅಂಗವಾಗಿ ನಡೆದ ಜಿಲ್ಲಾ ಮಟ್ಟದ ಸಹಕಾರ ವೈಭವ-2018 ಸ್ಪರ್ಧೆಯಲ್ಲಿ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸಂಘವು ಪ್ರದರ್ಶಿಸಿದ ಪ್ರದರ್ಶನಕ್ಕೆ ಪ್ರಥಮ ಪ್ರಶಸ್ತಿ ಲಭಿಸಿದೆ.

ಸಂಘದ ಆಡಳಿತ ಮಂಡಳಿಯೊಂದಿಗೆ ಸಿಬ್ಬಂದಿಗಳು ಭಾಗವಹಿಸಿ ವಿವಿಧ ಸಾಂಸ್ಕøತಿಕ ಪ್ರದರ್ಶನ ನೀಡಿದರು.

ಸಂಘದ ಆಡಳಿತ ಮಂಡಳಿ ಅಧ್ಯಕ್ಷ ವೈ.ಸುಧೀರ್ ಕುಮಾರ್,ನಿರ್ದೇಶಕರುಗಳಾದ ರಸೂಲ್ ವೈ.ಜಿ.,ಶಿವರಾಮ ಶೆಟ್ಟಿ,ರಾಜಾರಾಮ ರಾವ್,ಯಶವಂತ ಪಿ.ಬಿ.,ಮಾಧವ ಆಚಾರ್ಯ,ಸುಚರಿಉತಾ ಎಲ್.ಅಮೀನ್,ಕಾರ್ಯನಿರ್ವಹಣಾಧಿಕಾರಿ ನಿಶ್ಮಿತಾ ಪಿ.ಎಚ್. ಸಿಬ್ಬಂದಿಗಳು ಉಪಸ್ಥಿತರಿದ್ದರು.