ಜಾಗತಿಕ ತಾಪಮಾನ ಏರಿಕೆ ಬಗ್ಗೆ ಜಾಗ್ರತೆ ಅಗತ್ಯ-ರೊನಾಲ್ಡ್ ಗೋಮ್ಸ್

ಮೂಲ್ಕಿ: ಜಾಗತಿಕವಾಗಿ ನಮ್ಮದೇ ತಪ್ಪುಗಳಿಂದ ತಾಪಮಾನದಲ್ಲಿ ವಿಪರೀತ ಏರಿಕೆ ಕಂಡುಬರುತ್ತಿದ್ದು, ಈಗಲೇ ಜಾಗ್ರತೆ ವಹಿಸದಿದ್ದಲ್ಲಿ ಮುಂದಿನ ಜನಾಂಗ ನಮ್ಮನ್ನು ಕ್ಷಮಿಸದು ಎಂದು ಲಯನ್ಸ್ ಜಿಲ್ಲಾ ಗವರ್ನರ್ ರೊನಾಲ್ಡ್ ಗೋಮ್ಸ್ ಹೇಳಿದರು.

ಮೂಲ್ಕಿ ಬಂಟರ ಭವನದಲ್ಲಿ ಮೂಲ್ಕಿ ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್‌ಗೆ ಲಯನ್ಸ್ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ನೀಡಿದ ಸಂದರ್ಭ ಶನಿವಾರ ರಾತ್ರಿ ನಡೆದ ಚಾರ್ಟರ್ ನೈಟ್ ಸಂಭ್ರಮದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವದ ಅತ್ಯಂತ ಶ್ರೇಷ್ಠ ಸೇವಾ ಸಂಸ್ಥೆಯಾಗಿ ಮಾನ್ಯತೆ ಪಡೆದಿರುವ ಲಯನ್ಸ್ ಸಂಸ್ಥೆಯು ನಿರಂತರ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಜನಮಾನಸದಲ್ಲಿ ನೆಲೆಸಬೇಕೆಂದು ಅವರು ಮನವಿ ಮಾಡಿದರು.

ಇದೇ ಸಂದರ್ಭ ಅವರನ್ನು ಪತ್ನಿ ಅನಿತಾ ಗೋಮ್ಸ್ ಜತೆಗೆ ಅಭಿನಂದನಾ ಠರಾವಿನೊಂದಿಗೆ ಗೌರವಿಸಲಾಯಿತು.
ಲಯನ್ಸ್ ರಾಜ್ಯೋತ್ಸವ ಪ್ರಶಸ್ತಿ ವಿತರಣೆ; ಇದೇ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಸಾಧಕರಾದ ಚಂದ್ರಗಿರಿ ಕೃಷ್ಣ ಭಟ್(ಧಾರ್ಮಿಕ), ರಾಮ ಟಿ.ಕಾಂಚನ್( ಸಾಮಾಜಿಕ), ಪುರುಷೋತ್ತಮ ಕೆ.ಕೋಟ್ಯಾನ್(ಕೃಷಿ), ಜಯ ಕೆ.ಶೆಟ್ಟಿ( ಸಮಾಜ ಸೇವೆ), ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್(ಸಾಹಿತ್ಯ), ಸೀತಾರಾಮ್ ಕುಮಾರ್ ಕಟೀಲು(ಯಕ್ಷಗಾನ), ಡಾ.ಸುಪ್ರಭಾ ಹರೀಶ್(ಸಂಶೋಧನೆ), ಶೋಭಾ ಯು.(ಶೈಕ್ಷಣಿಕ), ಮತ್ತು ರವೀಂದ್ರ ಪ್ರಭು(ಸಂಗೀತ) ರವರನ್ನು ಲಯನ್ಸ್ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಸನ್ಮಾನ: ಕ್ರೀಡಾ ಸಾಧಕ ಆಯೆಷಾ ಸನಿಯಾ, ಕರಾಟೆ ಸಾಧಕ ಅಬ್ದುಲ್ ಅಮಾನ್ ಶೇಖ್ ಮತ್ತು ಶೈಕ್ಷಣಿಕ ಸಾಧಕಿ ರಚನಾ ಆರ್.ನಾಯಕ್‌ರವರನ್ನು ಸತ್ಕರಿಸಲಾಯಿತು.
ಸೇವಾ ಚಟುವಟಿಕೆಗಳು: ದಿ.ಜಿಎಮ್ ಶೆಟ್ಟಿ ಸ್ಮರಣಾರ್ಥ ಹರ್ಷರಾಜ್ ಶೆಟ್ಟಿ ಜಿಎಮ್ ನೀಡಿದ ವಿದ್ಯಾರ್ಥಿ ವೇತನವನ್ನು ೫ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಲಯನ್ಸ್ ಶೀತಲೀಕೃತ ಶವಾಗಾರ ನಿರ್ವಾಹಕ ಆಸಿಫ್ ಆಪತ್ಬಾಂಧವರನ್ನು ಗೌರವಿಸಲಾಯಿತು. ಮಾನಂಪಾಡಿ ಶಾಲಾ ಶಿಕ್ಷಕರ ವೇತನವನ್ನು ವಿತರಿಸಲಾಯಿತು. ಕರಾವಳಿ ಕಾವಲು ಠಾಣೆಗೆ ಎಲ್‌ಇಡಿ ಟಿವಿ ವಿತರಿಸಲಾಯಿತು. ಬೆಥನಿ ಶಾಲೆಯ ಶೇ.೧೦೦ ಸಾಧನೆಗೆ ಪುರಸ್ಕರಿಸಲಾಯಿತು.

ಇದೇ ಸಂದರ್ಭ ಲಯನ್ಸ್ ಅಂತರಾಷ್ಟಿçÃಯ ಫೌಂಡೇಶನ್‌ಗೆ ೨೦೦೦ ಡಾಲರ್ ದೇಣಿಗೆ ನೀಡಲಾಯಿತು. ಲಿಯೋ ಕ್ಲಬ್ ಅಧ್ಯಕ್ಷೆ ಸಾಧನಾ ವಿ.ಹೆಬ್ಬಾರ್ ಒಟ್ಟುಗೂಡಿಸಿದ ಪಾಕೆಟ್ ಮನಿ ರೂ.೩೦೦೦ವನ್ನು ಲಯನ್ಸ್ ಫೌಂಡೇಶನ್‌ಗೆ ದೇಣಿಗೆ ನೀಡುವ ಮೂಲಕ ಗಮನಸೆಳೆದರು. ಲಯನ್ಸ್ ಜಿಲ್ಲೆಯ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಮೂಲ್ಕಿ ಲಯನ್ಸ್ ಕ್ಲಬ್‌ಗೆ ಅಂತರಾಷ್ಟಿçÃಯ ಎಮ್‌ಜೆಎಫ್ ಗೌರವ ಪುರಸ್ಕಾರ ನೀಡಲಾಯಿತು.

ಮೂಲ್ಕಿ ಲಯನ್ಸ್ ಅಧ್ಯಕ್ಷ ವೆಂಕಟೇಶ್ ಹೆಬ್ಬಾರ್ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಲಯನ್ಸ್ ಜಿಲ್ಲಾ ಕಾರ್ಯದರ್ಶಿ ವಿಜಯವಿಷ್ಣು ಮಯ್ಯ, ಉಪರಾಜ್ಯಪಾಲ ವಸಂತ್ ಕುಮಾರ್ ಶೆಟ್ಟಿ, ಪ್ರಾಂತೀಯ ಅಧ್ಯಕ್ಷ ರೊನಾಲ್ಡ್ ಫೆರ್ನಾಂಡೀಸ್, ವಲಯಾಧ್ಯಕ್ಷ ವಾಸು ನಾಯಕ್, ಲಿಯೋ ಜಿಲ್ಲಾಧ್ಯಕ್ಷೆ ಶಿಬಾ ಉಳ್ಳಾಲ, ಮೂಲ್ಕಿ ಲಯನ್ಸ್ ನಿಕಟಪೂರ್ವಾಧ್ಯಕ್ಷ ಸದಾಶಿವ ಹೊಸದುರ್ಗ, ಲಿಯೋ ಕ್ಲಬ್ ಅಧ್ಯಕ್ಷೆ ಸಾಧನಾ ವಿ.ಹೆಬ್ಬಾರ್, ಭೂಮಿಕಾ ಸಾಲ್ಯಾನ್, ವಿಧಿಶಾ ಕುಡ್ವ ಉಪಸ್ಥಿತರಿದ್ದರು.

ಕಾರ್ಯದರ್ಶಿ ವಿನೋದ್ ಸಾಲ್ಯಾನ್ ಬೆಳ್ಳಾಯರು ಅಭಿನಂದನಾ ಭಾಷಣಗೈದರು. ವಿಜಯಕುಮಾರ್ ಕುಬೆವೂರು ಮತ್ತು ಉದಯ ಅಮೀನ್ ಮಟ್ಟು ಕಾರ್ಯಕ್ರಮ ನಿರ್ವಹಿಸಿದರು. ಕೋಶಾಧಿಕಾರಿ ಪ್ರಬೋಧ್ ಕುಡ್ವ ವಂದಿಸಿದರು.