ಕೋ-ಅಪರೇಟಿವ್ ಪರೀಕ್ಷೆಯಲ್ಲಿ ನಿಖಿಲ್‍ಗೆ 8ನೇ ರ್ಯಾಂಕ್

ಪಡುಬಿದ್ರಿ: ಬೆಂಗಳೂರಿನ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲವು ಡಿಸೆಂಬರ್‍ನಲ್ಲಿ ನಡೆಸಿದ ರಾಜ್ಯಮಟ್ಟದ ಡಿಪ್ಲೋಮಾ ಇನ್.ಕೋ-ಅಪರೇಟಿವ್ ಮ್ಯಾನೇಜ್‍ಮೆಂಟ್ ಪರೀಕ್ಷೆಯಲ್ಲಿ ಪಡುಬಿದ್ರಿ ಕಲ್ಲಟ್ಟೆ ಶ್ರೀ ಜಾರಂದಾಯ ದೈವಸ್ಥಾನ ಬಳಿಯ ನಿವಾಸಿ ನಿಖಿಲ್‍ರವರಿಗೆ 8 ನೇ ರ್ಯಾಂಕ್ ಲಭಿಸಿದೆ.

ಇವರು ಪಡುಬಿದ್ರಿ ಗ್ರಾಪಂ ಸದಸ್ಯ ಲಕ್ಷ್ಮಣ ಕೆ.ಕೋಟ್ಯಾನ್-ರೇಖಾ ದಂಪತಿಯ ಪುತ್ರ ಹಾಗೂ ಮೂಡಬಿದಿರೆ ಕರ್ನಾಟಕ ಇನ್ಸ್‍ಟಿಟ್ಯೂಟ್ ಆಫ್ ಕೋ-ಅಪರೇಟಿವ್ ಮ್ಯಾನೇಜ್‍ಮೆಂಟ್ ಸಂಸ್ಥೆಯ ವಿದ್ಯಾರ್ಥಿ.

ರಾಜ್ಯದಲ್ಲಿ 8 ಡಿಪ್ಲೋಮಾ ತರಬೇತಿ ಸಂಸ್ಥೆಗಳ ಪೈಕಿ 11 ರ್ಯಾಂಕ್‍ಗಳಲ್ಲಿ 4 ರ್ಯಾಂಕ್ ಮೂಡಬಿದಿರೆಗೆ ಲಭಿಸಿದೆ ಎಂದು ಸಂಸ್ಥೆಯ ಪ್ರಾಂಶುಪಾಲೆ ಶ್ಯಾಮಲಾ ತಿಳಿಸಿದ್ದಾರೆ.