ಕೋಡಿ ಕ್ರಿಕೆಟರ್ಸ್ ವತಿಯಿಂದ ಸದಸ್ಯರೊಬ್ಬರ ಹೃದಯ ಚಿಕಿತ್ಸೆಗಾಗಿ ರೂ.2 ಲಕ್ಷ ಕೊಡುಗೆ

ಪಡುಬಿದ್ರಿ: ಹೆಜಮಾಡಿ ಕೋಡಿಯ ಸಾಮಾಜಿಕ ಸೇವಾ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಕೋಡಿ ಕ್ರಿಕೆಟರ್ಸ್ ವತಿಯಿಂದ ತನ್ನ ಸದಸ್ಯರೊಬ್ಬರ ಹೃದಯ ಚಿಕಿತ್ಸೆಗಾಗಿ ಎರಡು ಲಕ್ಷ ರೂಪಾಯಿಗಳ ಚೆಕ್‍ನ್ನು ನೀಡಲಾಯಿತು.

ಕೋಡಿ ಕ್ರಿಕೆಟರ್ಸ್ ಸಂಚಾಲಕ ಸತೀಶ್ ಕೋಟ್ಯಾನ್ ಮುತುವರ್ಜಿಯಲ್ಲಿ ತಂಡದ ಸದಸ್ಯರೇ ಕೈಯಿಂದ ಭರಸಿ ರೂ.2 ಲಕ್ಷ ಒಟ್ಟುಗೂಡಿಸಿ ಭಾನುವಾರ ಹೆಜಮಾಡಿ ಕೋಡಿಯಲ್ಲಿ ನಡೆದ ಸಂಸ್ಥೆಯ ವಾರ್ಷಿಕ ಸಭೆಯಲ್ಲಿ ತಂಡದ ಸದಸ್ಯರಾಗಿದ್ದ ಹೆಜಮಾಡಿಕೋಡಿ ಒಡೆಯರಬೆಟ್ಟುವಿನ ಸಹದೇವ ಯಾನೆ ಸಾಧು ಎನ್. ಸುವರ್ಣರ ಚಿಕಿತ್ಸೆಯ ನೆರವಿಗಾಗಿ ಅವರ ಸಹೋದರ ಜನಾರ್ಧನ ಸುವರ್ಣರಿಗೆ ಚೆಕ್ ಹಸ್ತಾಂತರಿಸಲಾಯಿತು.

ಈ ಸಂದರ್ಭ ಕೋಡಿ ಕ್ರಿಕೆಟರ್ಸ್ ಅಧ್ಯಕ್ಷ ಕಿರಣ್ ಕೋಟ್ಯಾನ್, ಸಂಚಾಲಕ ಸತೀಶ್ ಕೋಟ್ಯಾನ್, ಉಪಾಧ್ಯಕ್ಷ ಪುರುಷೋತ್ತಮ ಸುವರ್ಣ, ಕಾರ್ಯದರ್ಶಿ ತಾರಾನಾಥ ಕುಂದರ್, ಕೋಶಾಧಿಕಾರಿ ಸಂದೀಪ್ ಕೋಟ್ಯಾನ್, ಸಂತೋಷ್ ಕೋಟ್ಯಾನ್ ಪುಣೆ ಮತ್ತಿತರರು ಉಪಸ್ಥಿತರಿದ್ದರು.

ಹೆಜಮಾಡಿಕೋಡಿ ವಿದ್ಯಾಪ್ರಸಾರ ವಿದ್ಯಾಮಂದಿರ ಶಾಲೆಯಲ್ಲಿ ಕಲಿಯುತ್ತಿರುವ ತಿಲಕ್ ಎಂಬ ವಿದ್ಯಾರ್ಥಿಯ ಸಂಪೂರ್ಣ ಶಾಲಾ ಶುಲ್ಕವನ್ನೂ ಕೋಡಿ ಕ್ರಿಕೆಟರ್ಸ್ ಸದಸ್ಯರು ಭರಿಸಿದ್ದರು.