ಕೆಥೊಲಿಕ್ ಸಭಾ ಅಧ್ಯಕ್ಷರಾಗಿ ರಾಲ್ಫಿ ಡಿಕೋಸ್ತ ಪುನರಾಯ್ಕೆ

ಮೂಲ್ಕಿ: ಮಂಗಳೂರು ಪ್ರದೇಶ ಕೆಥೊಲಿಕ್ ಸಭಾದ ಕೇಂದ್ರೀಯ ಸಮಿತಿಯ 2019-20ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಪಾವ್ಲ್ ರಾಲ್ಫಿ ಡಿಕೋಸ್ತ ಆಯ್ಕೆಯಾಗಿದ್ದಾರೆ. ಕಳೆದ ವರ್ಷದ ಅವಧಿಯಲ್ಲಿಯೂ ಅವರು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಮಂಗಳೂರಿನ ಕೊಡಿಯಾಲ್‍ಬೈಲ್‍ನಲ್ಲಿರುವ ಬಿಶಪ್ಸ್ ಹೌಸ್‍ನಲ್ಲಿ ಮೇ 12ರ ಭಾನುವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ಚುನಾವಣೆ ನಡೆದು ರಾಲ್ಫಿ ಡಿಕೋಸ್ತ ಪುನಾರಾಯ್ಕೆಯಾದರು.

ಕಥೊಲಿಕ್ ಸಭಾದ ಆಧ್ಯಾತ್ಮಿಕ ನಿರ್ದೇಶಕರಾದ ವಂ. ಮ್ಯಾಥ್ಯೂ ವಾಸ್ ಅವರ ಮಾರ್ಗದರ್ಶನದಲ್ಲಿ, ಚುನಾವಣೆ ಸಮಿತಿ ಸಂಚಾಲಕರಾದ ನೈಜಿಲ್ ಪಿರೇರಾ ಮತ್ತು ಸಹ ಸಂಚಾಲಕರಾದ ಲ್ಯಾನ್ಸಿ ಡಿಕುನ್ಹ ಚುನಾವಣೆಯನ್ನು ನೆರವೇರಿಸಿದರು.

ನೂತನವಾಗಿ ಆಯ್ಕೆಯಾದ ಸಮಿತಿ ಸದಸ್ಯರು:
ಅಧ್ಯಕ್ಷ: ಪಾವ್ಲ್ ರಾಲ್ಫಿ ಡಿಕೋಸ್ತ ಮೂಲ್ಕಿ, ನಿಯೋಜಿತ ಅಧ್ಯಕ್ಷ: ವಿಕ್ಟರ್ ಕೊರೆಯ, ಉಪಾಧ್ಯಕ್ಷ: ಹ್ಯಾರಿ ರೇಗೊ ಮೂಡುಬಿದಿರೆ, ಪ್ರಧಾನ ಕಾರ್ಯದರ್ಶಿ: ನವೀನ್ ಬ್ರ್ಯಾಗ್ಸ್ ಉಪ್ಪಿನಂಗಡಿ, ಜತೆ ಕಾರ್ಯದರ್ಶಿ: ಅಜಯ್ ಪಾಯ್ಸ್ ಮೊಗರ್ನಾಡ್, ಖಜಾಂಚಿ: ಜೋಕಿಮ್ ಡಿಸೋಜ ಕಡಬ, ಸಹ ಖಜಾಂಚಿ: ಗ್ರೆಟ್ಟಾ ಫೆರ್ನಾಂಡಿಸ್ ಕಾಟಿಪಳ್ಳ, ನಿಕಟಪೂರ್ವ ಅಧ್ಯಕ್ಷ: ಅನಿಲ್ ಲೋಬೊ.

ಅಧ್ಯಕ್ಷ ರಾಲ್ಫಿ ಡಿಕೋಸ್ತ ಮಹಾಸಭೆಗೆ ಸದಸ್ಯರನ್ನು ಸ್ವಾಗತಿಸಿ ಮಾತನಾಡಿದರು. ನೂತನ ಪದಾಧಿಕಾರಿಗಳಿಗೆ ಮಾಜಿ ಅಧ್ಯಕ್ಷ ಕಾಶ್ಮಿರ್ ಮಿನೇಜಸ್ ಅವರು ಹುದ್ದೆ ಹಸ್ತಾಂತರ ಮಾಡಿದರು. ಲ್ಯಾನ್ಸಿ ಡಿಕುನ್ಹ ಕಾರ್ಯ ನಿರ್ವಹಿಸಿದರು. ಸೆಲೆಸ್ತಿನ್ ಡಿಸೋಜ ಧನ್ಯವಾದ ಸಮರ್ಪಿಸಿದರು.