ಕಾರ್ಯಕ್ರಮಗಳಿಗೆ ಸೀಮಿತವಾಗದೆ ಸಾಮಾಜಿಕ ಸೇವೆಗೆ ಬದ್ಧರಾಗಿ-ಚಂದ್ರಶೇಖರ ಸುವರ್ಣ

ಮೂಲ್ಕಿ: ಸಂಘಟನೆಗಳು ಕೇವಲ ಕಾರ್ಯಕ್ರಮಗಳಿಗೆ ಸೀಮಿತವಾಗದೆ ಸಾಮಾಜಿಕ ಸೇವೆಗೆ ಬದ್ಧರಾಗಬೇಕು. ಬಿರುವೆರ್ ಕುಡ್ಲ ಸದಾ ಸಾಮಾಜಿಕ ಸೇವೆಯ ಮೂಲಕ ಇತರ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಮೂಲ್ಕಿ ಸುವರ್ಣ ಆಟ್ರ್ಸ್‍ನ ಚಂದ್ರಶೇಖರ ಸುವರ್ಣ ಹೇಳಿದರು.

ಭಾನುವಾರ ಮೂಲ್ಕಿಯ ಶಿವಾಜಿ ಮಂಟಪ ಬಳಿ ಬಿರುವೆರ್ ಕುಡ್ಲ ಮೂಲ್ಕಿ ಘಟಕದ ವತಿಯಿಂದ ಮೂಲ್ಕಿ ವಲಯ ಬಿಲ್ಲವ ಸಮಾಜ ಬಾಂಧವರಿಗಾಗಿ ನಡೆದ ವಾಲಿಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂಘಟನೆ ಬಲಯುತಗೊಳ್ಳಲು ನಿರಂತರ ಚಟುವಟಿಕೆ ಅಗತ್ಯ. ಕ್ರೀಡಾಕೂಟದ ಮೂಲಕ ಪ್ರತಿಭಾವಂತ ಯುವ ಆಟಗಾರರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವೂ ನಡೆಯಬೇಕು ಎಂದವರು ಹೇಳಿದರು.

ಸನ್ಮಾನ: ಇದೇ ಸಂದರ್ಭ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಾಹಿತಿ ಹಾಗೂ ಅಂಕಣಕಾರ ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್‍ರವರನ್ನು ಬಿರುವೆರ್ ಕುಡ್ಲ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಬಿರುವೆರ್ ಕುಡ್ಲ ಮೂಲ್ಕಿ ಘಟಕದ ಅಧ್ಯಕ್ಷ ಕಿಶೋರ್ ಸಾಲ್ಯಾನ್ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಿನಾಥ ಪಡಂಗ, ನಗರ ಪಂಚಾಯಿತಿ ಸದಸ್ಯ ಸತೀಶ್ ಅಂಚನ್ ಮುಖ್ಯ ಅತಿಥಿಗಳಾಗಿದ್ದರು.

ಬಿರುವೆರ್ ಕುಡ್ಲ ಕಾರ್ಯದರ್ಶಿ ಸತೀಶ್ ಕಿಲ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು. ರಿತೇಶ್ ಅಂಚನ್ ಸನ್ಮಾನಿತರನ್ನು ಪರಿಚಯಿಸಿದರು. ಉಮೇಶ್ ಮಾನಂಪಾಡಿ ವಂದಿಸಿದರು.

ಮಾನಂಪಾಡಿಗೆ ಪ್ರಶಸ್ತಿ: ಮೂಲ್ಕಿ ವ್ಯಾಪ್ತಿಯ 13 ತಂಡಗಳು ಭಾಗವಹಿಸಿದ್ದ ಪಂದ್ಯಾಟದಲ್ಲಿ ಮಾನಂಪಾಡಿ ತಂಡವು ಕಿಲ್ಪಾಡಿ ತಂಡವನ್ನು ಸೋಲಿಸಿ ನಗದು ಸಹಿತ ಪ್ರಶಸ್ತಿ ಗಳಿಸಿತು. ಫೈನಲ್‍ನಲ್ಲಿ ಸೋತ ಕಿಲ್ಪಾಡಿ ತಂಡವು ನಗದು ಸಹಿತ ದ್ವಿತೀಯ ಪ್ರಶಸ್ತಿ ಪಡೆಯಿತು.

ಸೆಮಿಫೈನಲ್‍ಗಳಲ್ಲಿ ಮಾನಂಪಾಡಿ ತಂಡವು ಕೆಎಸ್ ರಾವ್ ನಗರವನ್ನೂ, ಕಿಲ್ಪಾಡಿ ತಂಡವು ಅಂಗರಗುಡ್ಡೆ ತಂಡವನ್ನೂ ಸೋಲಿಸಿ ಫೈನಲ್ ಪ್ರವೇಶಿಸಿತ್ತು.

ಬಿರುವೆರ್ ಕುಡ್ಲ ಮೂಲ್ಕಿ ಘಟಕದ ಅಧ್ಯಕ್ಷ ಕಿಶೋರ್ ಸಾಲ್ಯಾನ್ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಚಿತ್ರಾಪು ಶ್ರೀ ವಿಠೋಭ ಬಾಲಲೀಲಾ ಭಜನಾ ಮಂದಿರದ ಅಧ್ಯಕ್ಷ ವಾಸು ¥