ಕಾಯಕಯೋಗಿ ಬಸವೇಶ್ವರರರು ದೇಶಕ್ಕೆ ನೀಡಿದ ಕೊಡುಗೆ ಅಪಾರ – ಶ್ರೀ ಚಂದ್ರಶೇಖರ ಸ್ವಾಮೀಜಿ

ಮೂಲ್ಕಿ: ಕಾಯಕವೇ ಕೈಲಾಸ ಎಂಬ ಸರಳವಾದ ಮಂತ್ರವನ್ನು ಜನರಿಗೆ ತಿಳಿಸಿ ದೇಶವನ್ನು ಮೌಢ್ಯದಿಂದ ಹೊರ ತಂದಿರುವ ಬಸವೇಶ್ವರರು ಮಹಾನ್ ಸಂತ ಎಂದು ಬೆಂಗಳೂರಿನ ಅಂತರಾಷ್ಟ್ರೀಯ ವಾಸ್ತು ತಜ್ಞ ಹಾಗೂ ವೈಜ್ಞಾನಿಕ ಜ್ಯೋತಿಷಿ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದ್ದಾರೆ.

ಅವರು ಲಂಡನ್ ದೇಶದ ಥೇಮ್ಸ್ ನದಿ ದಡದಲ್ಲಿರುವ ಲಾಂಬೆತ್‍ನಲ್ಲಿ ಪ್ರತಿಷ್ಠಾಪಿಸಿರುವ `ವಿಶ್ವ ಗುರು''ಶ್ರೀ ಬಸವೆಶ್ವರರ ದರ್ಶನ ಪಡೆದು ಮಾತನಾಡಿಕಾಯಕಯೋಗಿ ಬಸವೇಶ್ವರರರು ದೇಶಕ್ಕೆ ನೀಡಿದ ಕೊಡುಗೆ ಅಪಾರ’ ಎಂದು ಹೇಳಿದರು.
ಸಮಾರಂಭದಲ್ಲಿ ಲಾಂಬೆತ್‍ನ ಮಾಜಿ ಮೇಯರ್ ನೀರಜ್ ಪಾಟೀಲ್‍ರವರು ಸ್ವಾಮೀಜಿಯವರಿಗೆ ಬಸವ ಸಮಿತಿ ವತಿಯಿಂದ ಶಾಲು ಹೊದಿಸಿ ಫಲ ತಾಂಬೂಲ ನೀಡಿ ವಿಶೇಷವಾಗಿ ಸನ್ಮಾನಿಸಿದರು.

ಸಮಾರಂಭದಲ್ಲಿ ಮೂಲ್ಕಿ ಕಿಲ್ಪಾಡಿ ಶ್ರ ಚಂದ್ರಶೇಖರ ಸ್ವಾಮೀಜಿ ಆಶ್ರಮದ ನಿರ್ದೇಶಕಿ ರಜನಿ ಚಂದ್ರಶೇಖರ ಭಟ್, ಕುಮಾರಿ ರೋಶನಿ ಸಿ.ಭಟ್, ರಾಹುಲ್ ಸಿ. ಭಟ್ ಹಾಗೂ ನಿಖಿಲ್ ಕುಮಾರ್ ಭಾಗವಹಿಸಿದ್ದರು.

ಫೋಟೋ: ಲಂಡನಿನ ಥೇಮ್ಸ್ ನದಿ ದಡದ ಲಾಂಬೆತ್‍ನ ಮಾಜಿ ಮೇಯರ್ ನೀರಜ್ ಪಾಟೀಲ್‍ರವರು ಶ್ರೀ ಚಂದ್ರಶೇಖರ ಸ್ವಾಮೀಜಿಯವರಿಗೆ ಬಸವ ಸಮಿತಿ ವತಿಯಿಂದ ಶಾಲು ಹೊದೆಸಿ ಫಲತಾಂಬೂಲ ನೀಡಿ ಸನ್ಮಾನಿಸಿದರು.