ಕಾಪು ಬ್ಲಾಕ್ ಕಾಂಗ್ರೆಸ್

ಪಡುಬಿದ್ರಿ:ಕಾಂಗ್ರೆಸ್ ಪಕ್ಷವು ಮೂರು ರಾಜ್ಯಗಳಲ್ಲಿ ಸ್ಪಷ್ಟ ಬಹುಮತ ಪಡೆದ ಹಿನ್ನೆಲೆಯಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಂಗಳವಾರ ಸಂಜೆ ಎರ್ಮಾಳು ತೆಂಕ ರಾಜೀವಗಾಂಧಿ ನ್ಯಾಷನಲ್ ಅಕಾಡಮಿ ಆಫ್ ಪೊಲಿಟಿಕಲ್ ಎಜ್ಯುಕೇಶನ್ ಕೇಂದ್ರದಲ್ಲಿ ಮೂರು ಕೇಕ್‍ಗಳನ್ನು ಕತ್ತರಿಸಿ ಸಂಭ್ರಮಿಸಲಾಯಿತು.ಮಾಜಿ ಸಚಿವ ವಿನಯಕುಮಾರ್ ಸೊರಕೆ,ಪ್ರದೇರ್ಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿವಿ ಮೋಹನ್,ಕಾಪು ಬ್ಲಾಕ್ ಅಧ್ಯಕ್ಷ ನವೀನ್‍ಚಂದ್ರ ಸುವರ್ಣ,ಜಿಲ್ಲಾ ಸೇವಾದಳ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು,ಕಾಂಗ್ರೆಸ ಮುಖಂಡರುಗಳಾದ ದೀಪಕ್ ಎರ್ಮಾಳ್,ಕಿಶೋರ್ ಕುಮಾರ್ ಎರ್ಮಾಳು,ನಾಗೇಶ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.