ಕಲ್ಲಟ್ಟೆ ಬಂಟ ದೈವಕ್ಕೆ ಸ್ವರ್ಣ ಮುಖವಾಡ ಸಮರ್ಪಣೆ

ಪಡುಬಿದ್ರಿ: ಸುಮಾರು 50 ಲಕ್ಷ ರೂ. ಗಳ ವೆಚ್ಚದೊಂದಿಗೆ ಭಕ್ತಾದಿಗಳ ಮೂಲಕ ಕಲ್ಲಟ್ಟೆ ಶ್ರೀ ಜಾರಂದಾಯ ದೈವಸ್ಥಾನದ ಬಂಟ ದೈವಕ್ಕೆ ನಿರ್ಮಸಲಾಗಿರುವ ಸ್ವರ್ಣ ಮುಖ, ಕಡ್ಸಲೆ ಹಾಗೂ ಪರಿಕರಗಳನ್ನು ಕೃಷ್ಣಾಪುರ ಶಾಖಾ ಮಠದ ವೇದಮೂರ್ತಿ ಶ್ರೀನಿವಾಸ ಭಟ್ ಮತ್ತು ವೇದಮೂರ್ತಿ ಕುಡುಪು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ನಡೆದಿದ್ದ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ದೈವಕ್ಕೆ ಸಮರ್ಪಿಸಲಾಯಿತು.

ಇದಾದ ಬಳಿಕ ಕಲ್ಲಟ್ಟೆ ಮೂಲ ಕುಟುಂಬಿಕರ ನಾಗಬನದಲ್ಲಿ ಆಶ್ಲೇಷಾ ಬಲಿ, ವಾರ್ಷಿಕನೇಮೋತ್ಸವದ ಅಂಗವಾಗಿ ಚಪ್ಪರ ಮುಹೂರ್ತಗಳು ನಡೆದವು. ದೈವಸ್ಥಾನದ ಪ್ರಾಂಗಣದಲ್ಲಿ ಶ್ರೀ ಜಾರಂದಾಯ ಮಹಿಳಾ ಭಜನ ಮಂಡಳಿಯ ಸದಸ್ಯೆಯರಿಂದ ಭಜನಾ ಕಾರ್ಯಕ್ರಮವು ನಡೆಯಿತು. ಕಲ್ಲಟ್ಟೆ ಮೂಲ ಕುಟುಂಬಿಕರಾದ ರಾಧಾ ವಿಠಲ ಶೆಟ್ಟಿ ಮತ್ತು ಮಕ್ಕಳಿಂದ ಸುಮಾರು 5500 ಮಂದಿ ಭಕ್ತಾದಿಗಳ ಸಾರ್ವಜನಿಕ ಅನ್ನಸಂತರ್ಪಣೆಯೂ ಜರಗಿತು.
ಈ ಸಂದರ್ಭದಲ್ಲಿ ಕೊರ್ನಾಯ ಪದ್ಮನಾಭ ರಾವ್, ಕಾರ್‍ದಾಂಡ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪುರುಷೋತ್ತಮ ಭಟ್, ಸ್ವರ್ಣ ಮುಖ ಸಮರ್ಪಣಾ ಮುಂಬಯಿ ಸಮಿತಿಯ ಅಧ್ಯಕ್ಷ ಹರೀಶ್ ಶೆಟ್ಟಿ, ಪಡುಬಿದ್ರಿ ಸಮಿತಿಯ ಅಧ್ಯಕ್ಷ ಸಂತೋಷ್‍ಕುಮಾರ್ ಶೆಟ್ಟಿ, ಗುತ್ತಿನಾರ್ ವಿಶುಕುಮಾರ್ ಶೆಟ್ಟಿವಾಲ್, ರಮೇಶ್ ಶೆಟ್ಟಿ, ಎರ್ಮಾಳು ಉದಯ ಕೆ. ಶೆಟ್ಟಿ, ಭಾಸ್ಕರ ಶೆಟ್ಟಿ ಗುಂಡ್ಲಾಡಿ, ಹೇಮಚಂದ್ರ, ಸದಾಶಿವ ಪಡುಬಿದ್ರಿ, ಪಿ. ಕೆ. ಸದಾನಂದ, ಭಾಸ್ಕರ್ ಕೆ., ಹರೀಶ್ ಪಿ. ಆರ್., ಕಲ್ಲಟ್ಟೆಗುತ್ತು ರಾಮಕೃಷ್ಯ ಶೆಟ್ಟಿ, ದೈವಸ್ಥಾನದ ಅರ್ಚಕ ರಮೇಶ್ ಪೂಜಾರಿ, ಪಾತ್ರಿ ಗಣೇಶ್ ಪೂಜಾರಿ ಮತ್ತಿತರರಿದ್ದರು.