ಕನ್ನಡ ಕೇವಲ ಒಂದು ಭಾಷೆಯಲ್ಲ.ಅದು ಕನ್ನಡಿಗರ ವೈಭವಪೂರಿತವಾದ ಸಂಸ್ಕøತಿ-ಡಾ.ಯಶೋದಾ ಕರನಿಂಗ

ಪಡುಬಿದ್ರಿ: ಕನ್ನಡ ಕೇವಲ ಒಂದು ಭಾಷೆಯಲ್ಲ.ಅದು ಕನ್ನಡಿಗರ ವೈಭವಪೂರಿತವಾದ ಸಂಸ್ಕøತಿ.ಕನ್ನಡ ರಾಜ್ಯೋತ್ಸವ ಒಂದು ದಿನದ ಹಬ್ಬವಲ್ಲ.ಅದು ಕನ್ನಡ ನಾಡು ನುಡಿ ಸಂಸ್ಕøತಿಯ ಸಡಗರ.ಕನ್ನಡಿಗರ ಮನೆ ಮನಗಳ ನಿರಂತರ ಹಬ್ಬ ಎಂದು ಸಾಮಾಜಿಕ ಚಿಂತಕಿ ಕವಯಿತ್ರಿ ಡಾ.ಯಶೋದಾ ಕರನಿಂಗ ಹೇಳಿದರು.

ಅವರು ಪಡುಬಿದ್ರಿಯ ಸುಜ್ಲಾನ್ ಆರ್ ಎಂಡ್ ಆರ್ ಕಾಲನಿ ಸಭಾಭವನದಲ್ಲಿ ಉಡುಪಿ ಜಿಲ್ಲಾ ರಾಷ್ಟ್ರೀಯ ಸಾಂಸ್ಕøತಿಕ ಅಭಿವೃದ್ಧಿ ಪ್ರತಿಷ್ಠಾನ ಆಯೋಜಿಸಿದ “ಕನ್ನಡವನ್ನು ಪ್ರೀತಿಸು,ಭಾಷಾ ಪ್ರೇಮದ ಬಗ್ಗೆ ಒಂದಷ್ಟು” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಾತೃಭಾಷೆ ಕನ್ನಡವನ್ನು ಮರೆತ ಕನ್ನಡಿಗ ಆತ್ಮವಿಲ್ಲದ ದೇಹವಿದ್ದಂತೆ.ಮಾತೃಭಾಷೆಯ ದೃಢವಾದ ಅಡಿಪಾಯ ಹೊಂದಿದ ವ್ಯಕ್ತಿ ಜಗತ್ತಿನ ಯಾವುದೇ ಭಾಷೆಯನ್ನು ಸಲೀಸಾಗಿ ಕಲಿಯಬಲ್ಲ ಸಂವಹಿಸಬಲ್ಲ.ಕನ್ನಡ ಭಾಷೆಯನ್ನು ಪ್ರೀತಿಸುವುದೆಂದರೆ ಅನ್ಯ ಭಾಷೆಯನ್ನು ದ್ವೇಷಿಸೋ ಮನೋಭಾವವಲ್ಲ.ಆದರೆ ಅನ್ಯ ಭಾಷೆಯ ಮುಂದೆ ನಮ್ಮ ಭಾಷೆಗೆ ಕೀಳರಿಮೆ ಉಂಟಾಗದಂತೆ ಗೌರವ ಉಳಿಸಿಕೊಂಡು ಬೆಳೆಸುವುದು ಎಂದವರು ಅಭಿಪ್ರಾಯಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎನ್‍ಎಸ್‍ಸಿಡಿಎಫ್ ಅಧ್ಯಕ್ಷ ಗಂಗಾಧರ ಗಾಂಧಿ ಮಾತನಾಡಿ,ಅನ್ಯ ಭಾಷೆಯ ಪ್ರಭಾವಕ್ಕೆ ಸಿಲುಕಿ ನಲುಗುತ್ತಿರುವ ಕನ್ನಡದ ಅಸ್ಮಿತೆಯನ್ನು ಅನನ್ಯತೆಯನ್ನು ಕಾಪಾಡುವ ಕಾರ್ಯ ಆಗಬೇಕಿದೆ ಎಂದರು.

ಕೆಎಸ್‍ಸಿಡಿಎಫ್ ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ,ಸಾಮಾಜಿಕ ಕಾರ್ಯಕರ್ತೆ ಯೋಗೀಶ್ವರೀ,ಸುಜ್ಲಾನ್ ಆರ್ ಎಂಡ್ ಆರ್ ಕಾಲನಿಯ ಅಧ್ಯಕ್ಷ ಉಮಾನಾಥ ಪಡುಬಿದ್ರಿ ಉಪಸ್ಥಿತರಿದ್ದರು.