ಕನ್ನಂಗಾರ್ ಉರೂಸ್ ಲಾಂಛನ ಕರಪತ್ರ ಬಿಡುಗಡೆ

ಪಡುಬಿದ್ರಿ: ಇತಿಹಾಸ ಪ್ರಸಿದ್ಧ ಹೆಜಮಾಡಿಯ ಕನ್ನಂಗಾರ್ ಜುಮ್ಮಾ ಮಸೀದಿಯ ಆವರಣದಲ್ಲಿರುವ ಶೈಖುನಾ ಸಿರಾಜುದ್ದೀನ್ ವಲಿಯುಲ್ಲಾಹಿ ದರ್ಗಾದ ಮೂರು ವರ್ಷಗಳಿಗೊಮ್ಮೆ ನಡೆಯುವ ಕನ್ನಂಗಾರ್ ಉರೂಸ್‍ನ ಲಾಂಛನ ಹಾಗೂ ಕರಪತ್ರ ಬಿಡುಗಡೆ ಸಮಾರಂಭವು ದರ್ಗಾ ಮುಂಭಾಗದಲ್ಲಿ ಭಾನುವಾರ ನಡೆಯಿತು.

ದರ್ಗಾದಲ್ಲಿ ದುವಾ ನೆರವೇರಿಸಿದ ಬಳಿಕ ಕನ್ನಂಗಾರ್ ಜುಮ್ಮಾ ಮಸೀದಿಯ ಖತೀಬ್ ಮುಹಮ್ಮದ್ ಅಶ್ರಫ್ ಸಖಾಫಿ ಕಿನ್ಯಾ ಲಾಂಛನ ಹಾಗೂ ಕರಪತ್ರವನ್ನು ಬಿಡುಗಡೆಗೊಳಿಸಿದರು.

ಮೂರು ವರ್ಷಗಳಿಗೊಮ್ಮೆ ನಡೆಯುವ ಇಲ್ಲಿನ ಉರೂಸ್ ಸಮಾರಂಭವು ಈ ಭಾರಿ 2020ರ ಫೆಬ್ರವರಿ 21ರಿಂದ 29ರವರೆಗೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಹಿಫ್ಲುಲ್ ಕುರ್‍ಆನ್ ಕಾಲೇಜು ವಿದ್ಯಾರ್ಥಿಗಳಿಗೆ ಹಾಫಿಲ್ ಪದವಿ ಪ್ರಧಾನ ನಡೆಯಲಿದೆ.

ಉರೂಸ್ ಸಮಾರಂಭದಲ್ಲಿ ಸಾಮಾಜಿ, ಧಾರ್ಮಿಕ, ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದು ಉರೂಸ್ ಸಮಿತಿಯ ಅಧ್ಯಕ್ಷ ಯು.ಕೆ.ಅಬ್ದುಲ್ ಹಮೀದ್ ಮಿಲಾಫ್ ತಿಳಿಸಿದರು.

ಉರೂಸ್ ಸಮಿತಿಯ ಉಪಾಧ್ಯಕ್ಷ ಸನಾ ಇಬ್ರಾಹಿಮ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸಿರಾಜ್ ಎಂ.ಎಸ್, ಸಂಚಾಲಕ ಶಾಹುಲ್ ಹಮೀದ್ ನಯೀಮಿ, ಕಿಫಾಯತ್ ಅಧ್ಯಕ್ಷ ಅಬ್ದುರ್ರಹ್ಮಾನ್ ಪುತ್ತು, ಜಮಾತ್ ಉಪಾಧ್ಯಕ್ಷ ಸೂಪಿ ಹಾಜಿ, ಕಾರ್ಯದರ್ಶಿ ಅಬ್ದುಲ್ ಅಜೀಜ್, ಅಬೂಬಕ್ಕರ್ ಹಾಜಿ, ಆಸಿಮಾಕ, ಎಮ್.ಐ ಮೊಹಮ್ಮದ್, ಬಿ.ಕೆ.ಮೊಹಮ್ಮದ್ ಉಪಸ್ಥಿತರಿದ್ದರು.