ಕಡಲು ಕೊರೆತ

ಪಡುಬಿದ್ರಿ : ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ಪಡುಬಿದ್ರಿ ಠಾಣಾ ವ್ಯಾಪ್ತಿಯ ಪಡುಬಿದ್ರಿ ಬೀಚ್, ಬಡಾ ಗ್ರಾಮದ 6 ನೇ ವಾರ್ಡಿನ ಮೀರಾ ಸಾಲ್ಯಾನ್, ರೋಹಿತಾಕ್ಷ ಸುವರ್ಣ, ಸಾಲ್ದಾನಾರವರ ಒಟ್ಟು ಸುಮಾರು 7 ತೆಂಗಿನ ಮರಗಳು ಕಡಲು ಕೊರೆತದಿಂದ ಬುಡ ಸಮೇತ ನೆಲಕ್ಕೆ ಉರುಳಿವೆ. ಈ ಬಗ್ಗೆ ಪಿಎಸ್‍ಐ ಸುಬ್ಬಣ್ಣ ಬಿ., ಪೊಲೀಸ್ ಠಾಣಾ ಸಿಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.