ಕಟ್ಟಡ ಕಾಮಗಾರಿ ವೇಳೆ ಬಿದ್ದು ಗಂಭೀರ ಗಾಯ

ಪಡುಬಿದ್ರಿ: ಹೆದ್ದಾರಿ ಬಳಿ ನಿರ್ಮಾಣ ಹಂತದ ಕಟ್ಟಡದಲ್ಲಿ ಕಾಮಗಾರಿ ನಡೆಸುತ್ತಿದ್ದ ವೇಳೆ ಕಾರ್ಮಿಕರೊಬ್ಬರು 3ನೇ ಮಹಡಿಯಿಂದ ಬಿದ್ದು ಗಂಭೀರ ಗಾಯಗೊಂಡ ಘಟನೆ ಪಡುಬಿದ್ರಿಯಲ್ಲಿ ನಡೆದಿದೆ.

ಕೊಲ್ಕತ್ತಾ ವಾಸಿ ಚಂದನ್ ಸರ್ಕಾರ್(22) ಗಂಭೀರ ಗಾಯಗೊಂಡವರು.
ಪಡುಬಿದ್ರಿಯ ಅಂಚೆ ಕಛೇರಿ ಮುಂಭಾಗದಲ್ಲಿ ನಿರ್ಮಾಣ ಹಂತದ ಕಟ್ಟಡ ಕಾಮಗಾರಿ ನಿರ್ವಹಣೆ ಸಂದರ್ಭ 3ನೇ ಮಹಡಿಯಲ್ಲಿ ಕಾಮಗಾರಿ ನಿರ್ವಹಿಸುತ್ತಿದ್ದಾಗ ಚಂದನ್ ಸರ್ಕಾರ್ ಅಕಸ್ಮಾತ್ ಕಾಲು ಜಾರಿ ಕೆಳಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡಿದ್ದರು.
ಈ ಬಗ್ಗೆ ಕಟ್ಟಡ ಗುತ್ತಿಗೆದಾರರ ವಿರುದ್ಧ ನಿರ್ಲಕ್ಷದ ಆರೋಪ ಹೊರಿಸಿ ಪಡುಬಿದ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ.