ಓಶಿಯನ್ ವಾರಿಯರ್ಸ್‍ಗೆ ಪಿಬಿಸಿ ಟ್ರೋಫಿ-2018

ಪಡುಬಿದ್ರಿ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್

ಪಡುಬಿದ್ರಿ: ಇಲ್ಲಿನ ಬೋರ್ಡ್ ಶಾಲಾ ಮೈದಾನದ ಬ್ಯಾಡ್ಮಿಂಟನ್ ಕೋರ್ಟ್‍ನಲ್ಲಿ ಶನಿವಾರ ಮತ್ತು ಭಾನುವಾರ ರಾತ್ರಿ ನಡೆದ ಪಡುಬಿದ್ರಿ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಪಂದ್ಯಾಕೂಟದಲ್ಲಿ ನವೀನ್‍ಚಂದ್ರ ಜೆ.ಶೆಟ್ಟಿ ಮಾಲೀಕತ್ವದ ಓಶಿಯನ್ ವಾರಿಯರ್ಸ್ ಪ್ರಶಸ್ತಿ ಗಳಿಸಿತು.

ಫೆ`ನಲ್‍ನಲ್ಲಿ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಮಾಲೀಕತ್ವದ ಸ್ಕಂದ ಫ್ರೆಂಡ್ಸ್ ತಂಡವನ್ನು 11-15,15-11,15-7,5-5 (ಒಟ್ಟು ಅಂಕ ಆಧಾರ)ಅಂಕಗಳಿಂದ ಸೋಲಿಸಿ ಪಿಬಿಸಿ ಟ್ರೊಫಿ ಸಹಿತ ನಗದು ರೂ.15,555/ನ್ನು ಪಡೆಯಿತು.ಪಂದ್ಯಾಟದುದ್ದಕ್ಕೂ ಓಶಿಯನ್ ವಾರಿಯರ್ಸ್‍ನ ಹಿರಿಯ ಆಟಗಾರರಾದ ಸಂಜಯ್ ಆರ್.ಎಮ್.ಮತ್ತು ವೈ.ಸುೀರ್ ಕುಮಾರ್ ತಮ್ಮ ಅನುಭವನ್ನು ಧಾರೆಯೆರೆದು ಪ್ರಶಸ್ತಿ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.


ಫೈನಲ್‍ನಲ್ಲಿ ಸೋತ ಸ್ಕಂದ ಫ್ರೆಂಡ್ಸ್ ದ್ವಿತೀಯ ಪ್ರಶಸ್ತಿ ಸಹಿತ ನಗದು ರೂ.9,999ನ್ನು ಪಡೆಯಿತು.

ಸೆಮಿಫೈನಲ್‍ಗಳಲ್ಲಿ ಓಶಿಯನ್ ವಾರಿಯರ್ಸ್ ತಂಡವು ಸುಕುಮಾರ್ ವೈ.ಮತ್ತು ರಮೀಝ್ ಹುಸೈನ್ ಮಾಲೀಕತ್ವದ ನವರಂಗ್ ವಾರಿಯರ್ಸ್ ತಂಡವನ್ನೂ,ಸ್ಕಂದ ಫ್ರೆಂಡ್ಸ್ ತಂಡವು ಶಂಕರ್ ಕಂಚಿನಡ್ಕ ಮಾಲೀಕತ್ವದ ಯಶ್ ವಾರಿಯರ್ಸ್ ತಂಡವನ್ನೂ ಸೋಲಿಸಿ ಫೈನಲ್ ಪ್ರವೇಶಿಸಿತ್ತು.ಒಟ್ಟು 8 ತಂಡಗಳು ಪಂದ್ಯಾಕೂಟದಲ್ಲಿ ಭಾಗವಹಿಸಿದ್ದವು.

ವೈಯಕ್ತಿಕ ಪ್ರಶಸ್ತಿ: ಓಶಿಯನ್ ವಾರಿಯರ್ಸ್‍ನ ಸಂಜಯ್ ಆರ್‍ಎಮ್ ಬೆಸ್ಟ್ ಆಲ್‍ರೌಂಡರ್,ಬೆಸ್ಟ್ ಸ್ಮ್ಯಾಶರ್ ಆಗಿ ಸ್ಕಂದ ವಾರಿಯರ್ಸ್‍ನ ಮನೋಜ್ ವೈಯಕ್ತಿಕ ಪ್ರಶಸ್ತಿ ಪಡೆದರು.

ಸ್ಕಂದ ವಾರಿಯರ್ಸ್ ಅತ್ಯುತ್ತಮ ಶಿಸ್ತುಬದ್ಧ ತಂಡ ಪ್ರಶಸ್ತಿ ಗಳಿಸಿತು.
ಪ್ರಶಸ್ತಿ ವಿತರಣೆ:ಪಡುಬಿದ್ರಿ ಬ್ಯಾಡ್ಮಿಂಟನ್ ಕ್ಲಬ್ ಆಶ್ರಯದಲ್ಲಿ ನಡೆದ ಪಂದ್ಯಾಕೂಟದ ಸಮಾರೋಪ ಸಮಾರಂಭದಲ್ಲಿ ಪಡುಬಿದ್ರಿ ಸಿಎ ಬ್ಯಾಂಕ್ ಅಧ್ಯಕ್ಷ ಹಾಗೂ ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ಕಾರ್ಯದರ್ಶಿ ವೈ.ಸುಧೀರ್ ಕುಮಾರ್,ಕಾಪು ಬಿಜೆಪಿ ಕ್ಷೇತ್ರ ಸಮಿತಿಯ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು,ಪಡುಬಿದ್ರಿ ಫ್ರೆಂಡ್ಸ್ ಕ್ರಿಕೆಟರ್ಸ್ ಅಧ್ಯಕ್ಷ ನವೀನ್‍ಚಂದ್ರ ಜೆ.ಶೆಟ್ಟಿ,ಕಲ್ಲಟ್ಟೆ ಜಾರಂದಾಯ ಸೇವಾ ಸಮಿತಿಯ ಅಧ್ಯಕ್ಷ ಸಂತೋಷ್ ಶೆಟ್ಟಿ ಪಲ್ಲವಿ,ಕಾಪು ಕಾಂಗ್ರೆಸ್ ಹಿಂದುಳಿದ ವಿಭಾಗದ ಅಧ್ಯಕ್ಷ ದೀಪಕ್‍ಕುಮಾರ್ ಎರ್ಮಾಳು,ಜಿಲ್ಲಾ ಟೆನ್ನಿಸ್‍ಬಾಲ್ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷ ಶರತ್ ಶೆಟ್ಟಿ,ಜೇಸಿಐ ಪಡುಬಿದ್ರಿ ಅಧ್ಯಕ್ಷ ಅನಿಲ್ ಶೆಟ್ಟಿ,ಉದ್ಯಮಿ ಪ್ರದೀಪ್ ಶೆಟ್ಟಿ,ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ಪದಾಕಾರಿಗಳಾದ ಕಾಶೀರಾಮ್ ಪೈ,ಅರುಣ್ ಸೇರಿಗಾರ್ ಅರುಣೋದಯ,ಸಂದೀಪ್ ನಾಯಕ್ ವಿಜೇತರಿಗೆ ಪ್ರಶಸ್ತಿ ವಿತರಿಸಿದರು.

ಪಡುಬಿದ್ರಿ ಬ್ಯಾಂಡ್ಮಿಂಟನ್ ಕ್ಲಬ್ ಅಧ್ಯಕ್ಷ ವೈ.ಸುಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಸನ್ಮಾನ:ರಾಷ್ಟ್ರೀಯ ಹೈಜಂಪ್ ಪಟು ಪ್ರಕಾಶ್ ಶೆಟ್ಟಿ ಹೆಜಮಾಡಿ,ರಾಜ್ಯ ಬ್ಯಾಡ್ಮಿಂಟನ್ ಆಟಗಾರ ಸಂಜಯ್ ಆರ್‍ಎಮ್,ಉಮಿಲ್ ಚಿತ್ರ ನಟಿ ಪೂಜಾ ಶೆಟ್ಟಿ,ಕಂಬಳಬೆಟ್ಟು ಚಿತ್ರನಟಿ ಐಶ್ವರ್ಯಾ ಆಚಾರ್ಯ,ಝೀ ಕನ್ನಡದ ಕನ್ನಡ ಕೋಗಿಲೆ ಫೈನಲಿಸ್ಟ್ ನಿಕಿತ್ ಕರ್ಕೇರ ಹಾಗೂ ಪಂದ್ಯಾಟದ ಪ್ರಮುಖ ಆಯೋಜಕರಾದ ಪ್ರದೀಪ್ ಆಚಾರ್ಯ ಮತ್ತು ಮಿನ್ನಾ ಎಸ್.ಶೆರೀಫ್‍ರವರನ್ನು ಸನ್ಮಾನಿಸಲಾಯಿತು.

ಪಡುಬಿದ್ರಿ ಬ್ಯಾಂಡ್ಮಿಂಟನ್ ಕ್ಲಬ್ ಗೌರವಾಧ್ಯಕ್ಷ ವೈ.ದಾಮೋದರ್,ಕಾರ್ಯದರ್ಶಿ ರಮೀಝ್ ಹುಸೈನ್,ರೆಫ್ರಿಗಳಾದ ಅಕ್ಷತ್ ಉಡುಪಿ,ಸುಮಿತ್ ಎರ್ಮಾಳ್ ಮತ್ತು ಲೋಹಿತಾಕ್ಷ ಸುವರ್ಣ,ಪ್ರಶಾಂತ್,ಶೌಕತ್ ಪಡುಬಿದ್ರಿ ಉಪಸ್ಥಿತರಿದ್ದರು.ಸಂತೋಷ್ ಪಡುಬಿದ್ರಿ ಕಾರ್ಯಕ್ರಮ ನಿರ್ವಹಿಸಿದರು.ಪ್ರದೀಪ್ ಆಚಾರ್ಯ ವಂದಿಸಿದರು.