ಏರ್ ಇಂಡಿಯಾ ಕ್ರಿಕೆಟರ್ಸ್‍ಗೆ ಹೆಜಮಾಡಿಯ ದುರ್ಗಾ ಪ್ರೀಮಿಯರ್ ಲೀಗ್ 2ಕೆ19

ಪಡುಬಿದ್ರಿ: ಹೆಜಮಾಡಿಯ ಬಸ್ತಿಪಡ್ಪು ಮೈದಾನದಲ್ಲಿ ಕಳೆದ 3 ದಿನಗಳಿಂದ ಹೆಜಮಾಡಿ ದುರ್ಗಾ ಫ್ರೆಂಡ್ಸ್ ಆಶ್ರಯದಲ್ಲಿ ನಡೆದ ದುರ್ಗಾ ಪ್ರೀಮಿಯರ್ ಲೀಗ್ 2ಕೆ19 ಕ್ರಿಕೆಟ್ ಪಂದ್ಯಾಟದ ಫೈನಲ್‍ನಲ್ಲಿ ರೋಮಾಂಚಕಾರಿಯಾಗಿ ಮಾರುತಿ ಕ್ರಿಕೆಟರ್ಸ್‍ನ್ನು ಎರಡು ರನ್‍ಗಳಿಂದ ಸೋಲಿಸಿ ಬಲಿಷ್ಠ ಏರ್ ಇಂಡಿಯಾ ಕ್ರಿಕೆಟರ್ಸ್ ತಂಡವು ದುರ್ಗಾ ಪ್ರೀಮಿಯರ್ ಲೀಗ್ ಟ್ರೋಫಿ ಸಹಿತ ನಗದು ರೂ.ಒಂದು ಲಕ್ಷ ಪಡೆಯಿತು.

ಫಯಾಝ್ ಮಾಲಿಕತ್ವದ ಏರ್ ಇಂಡಿಯಾ ತಂಡವು ಫೈನಲ್‍ನಲ್ಲಿ ನಿಗದಿತ 8 ಓವರ್‍ನಲ್ಲಿ 4 ವಿಕೆಟ್ ನಷ್ಟಕ್ಕೆ 59 ರನ್ ಗಳಿಸಿತ್ತು.ಗುರಿ ಬೆನ್ನಟ್ಟಿದ ಜಿತೇಂದ್ರ ಕೋಟ್ಯಾನ್ ಮತ್ತು ಪಾಂಡುರಂಗ ಕರ್ಕೇರ ಮಾಲಿಕತ್ವದ ಮಾರುತಿ ಕ್ರಿಕೆಟರ್ಸ್ ತಂಡವು ಕೊನೇ ಕ್ಷಣದವರೆಗೆ ಹೋರಾಟ ನಡೆಸಿದರೂ ಮುಕ್ತಾಯ ಹಂತದಲ್ಲಿ ವಿಚಲಿತರಾಗಿ ವಿಕೆಟ್‍ಗಳನ್ನು ಕಳೆದುಕೊಳ್ಳುತ್ತ ಎರಡು ರನ್‍ಗಳಿಂದ ಸೋಲುಂಡರು.8 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 57 ರನ್ ಗಳಿಸಲಷ್ಟೇ ಶಕ್ತವಾಯಿತು.ಫೈನಲ್‍ನಲ್ಲಿ ಸೋತ ಮಾರುತಿ ಕ್ರಿಕೆಟರ್ಸ್ ದ್ವಿತೀಯ ಟ್ರೋಫಿ ಸಹಿತ ನಗದು ರೂ.50 ಸಾವಿರ ಪಡೆಯಿತು.

ವೈಯಕ್ತಿಕ ಪ್ರಶಸ್ತಿ: ಪಂದ್ಯಾಟದುದ್ದಕ್ಕೂ ಆಲ್‍ರೌಂಡ್ ಆಟವಾಡಿದ ಏರ್ ಇಂಡಿಯಾ ತಂಡದ ಅಪೆಕ್ಸ್(ಮೂಲತಃ ಬೆಂಗಳೂರು ನ್ಯಾಶ್ ಆಟಗಾರ) ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಟ ಪ್ರಶಸ್ತಿ ಪಡೆದರು.
ಅತ್ಯುತ್ತಮ ಬ್ಯಾಟ್ಸ್‍ಮೆನ್ ಆಗಿ ಏರ್ ಇಂಡಿಯಾದ ಮಹೇಶ್(ನ್ಯಾಶ್ ಬೆಂಗಳೂರು) ಮತ್ತು ಅತ್ಯುತ್ತಮ ಬೌಲರ್ ಆಗಿ ಮಾರುತಿ ತಂಡದ ಸಚಿನ್ ಮಹಾದೇವ್(ಜೈಕರ್ನಾಟಕ ಬೆಂಗಳೂರು) ವೈಯಕ್ತಿಕ ಪ್ರಶಸ್ತಿ ಗಳಿಸಿದರು.
ಪ್ರಶಸ್ತಿ ವಿತರಣೆ: ಸಮಾರೋಪ ಸಮಾರಂಭದಲ್ಲಿ ಮಂಗಳೂರು ದಯಾ ಎಂಟರ್‍ಪ್ರೈಸಸ್ ಮಾಲೀಕ ಅರ್ಜುನ್ ಪೈ,ಅವಿಭಜಿತ ದಕ ಜಿಲ್ಲಾ ಮೀನು ಮಾರಾಟ ಮಹಾಮಂಡಲ ಅಧ್ಯಕ್ಷ ಯಶಪಾಲ್ ಸುವರ್ಣ,ಕಾಪು ಬಿಜೆಪಿ ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು,ಜಿಪಂ ಸ್ಥಾಯೀ ಸಮಿತಿಯ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ,ಹೆಜಮಾಡಿ ಗ್ರಾಪಂ ಉಪಾಧ್ಯಕ್ಷ ಸುಧಾಕರ ಕರ್ಕೇರ,ಶರಣ್‍ಕುಮಾರ್ ಮಟ್ಟು,ಕೋಡಿ ಕ್ರಿಕೆಟರ್ಸ್‍ನ ಸತೀಶ್ ಕೋಟ್ಯಾನ್,ಪ್ರತೀಕ್ ಇಲೆವೆನ್ ತಂಡದ ಹೇಮಾನಂದ ಕೆ.ಪುತ್ರನ್,ಬುಲೆಟ್ ಫ್ರೆಂಡ್ಸ್‍ನ ಶರೀಫ್,ಕೆಸಿಕೆಯ ಸಂತೋಷ್ ಪುಣೆ,ಏರ್ ಇಂಡಿಯಾದ ಫಯಾಝ್,ಮಾರುತಿ ತಂಡದ ಜಿತೇಂದ್ರ ಕೋಟ್ಯಾನ್,ಟ್ರೀ ಹೌಸ್‍ನ ಸಯ್ಯದ್,ದೃಶಾ ವಾರಿಯರ್ಸ್‍ನ ಸಂದೇಶ್ ಪುತ್ರನ್,ಶಿವಶಕ್ತಿಯ ಸಂದೇಶ್ ಶೆಟ್ಟಿ,ದುರ್ಗಾ ಫ್ರೆಂಡ್ಸ್ ಅಧ್ಯಕ್ಷ ಎಚ್.ರವಿ ಕುಂದರ್,ಗೌರವಾಧ್ಯಕ್ಷ ದೇವದಾಸ ಸಾಲ್ಯಾನ್,ಸಂಘಟಕ ಸಂದೇಶ್ ಪುತ್ರನ್,ಅಂಪೈರ್ಸ್‍ಗಳಾದ ರಾಘು ಕಾಡೂರು,ಅವಿನಾಶ್ ಮಂಗಳೂರು,ಪ್ರೀತಮ್ ಹಾಸನ,ವೀಕ್ಷಕ ವಿವರಣೆಗಾರರಾದ ಪ್ರಶಾಮತ್ ಅಂಬಲ್ಪಾಡಿ ಮತ್ತು ವಿನಯ್ ಉದ್ಯಾವರ,ಸ್ಕೋರರ್ ಹರೀಶ್ ವಿಜೇತರಿಗೆ ಪ್ರಶಸ್ತಿ ವಿತರಿಸಿದರು.