ಎ.3-4: ಹೆಜಮಾಡಿ ಬಸ್ತಿಪಡ್ಪು ಕೋರ್ದಬ್ಬು ನೇಮೋತ್ಸವ

ಪಡುಬಿದ್ರಿ: ಹೆಜಮಾಡಿಯ ಬಸ್ತಿಪಡ್ಪು ಶ್ರೀ ಕೋರ್ದಬ್ಬು ದೈವಸ್ಥಾನದ ವಾರ್ಷಿಕ ನೇಮೋತ್ಸವವು ಎಪ್ರಿಲ್ 3-4 ರಂದು ನಡೆಯಲಿದೆ.

ಎ.3 ಗುರುವಾರ ಮಧ್ಯಾಹ್ನ 12.30 ಗಂಟೆಗೆ ಪಲ್ಲಪೂಜೆಯೊಂದಿಗೆ ಸಾರ್ವಜನಿಕ ಮಹಾ ಅನ್ನಸಂತರ್ಪಣೆ,ರಾತ್ರಿ 7 ಗಂಟೆಗೆ ಭಂಡಾರ ಬರುವುದು, 8 ಗಂಟೆಗೆ ಶ್ರೀ ಕೋರ್ದಬ್ಬು ದೈವಕ್ಕೆ ನೂತನ ಸ್ವರ್ಣ ಖಡ್ಗ ಸಮರ್ಪಣೆ ಮತ್ತು ತನ್ನಿಮಾನಿಗ ದೇವಿಗೆ ನೂತನ ಸ್ವರ್ಣ ಗೆಜ್ಜೆ ಕತ್ತಿ, ಸ್ವರ್ಣಾಭರಣ,ಬೆಳ್ಳಿ ಕಿರೀಟ ಸಮರ್ಪಣೆ,ರಾತ್ರಿ 10 ಗಂಟೆಯಿಂದ ಕೋರ್ದಬ್ಬು ಹಾಗೂ ತನ್ನಿಮಾನಿಗ ನೇಮೋತ್ಸವ ನಡೆಯಲಿದೆ.

ಎ.4 ಶುಕ್ರವಾರ ಸಂಜೆ 4 ಗಂಟೆಗೆ ಧೂಮಾವತಿ- ಬಂಟ ದೈವಗಳ ನೇಮೋತ್ಸವ ನಡೆಯಲಿದೆ