ಎ.25-28: ಹೆಜಮಾಡಿ ಕೋಡಿ ಶ್ರೀ ಬ್ರಹ್ಮಮುಗ್ಗೆರ್ಕಳ ದೈವಸ್ಥಾನ

ಪಡುಬಿದ್ರಿ: ಇಲ್ಲಿಗೆ ಸಮೀಪದ ಹೆಜಮಾಡಿ ಕೋಡಿ ಶ್ರೀ ಬ್ರಹ್ಮ ಮುಗ್ಗೆರ್ಕಳ ದೈವಸ್ಥಾನದ ಪುನಃಪ್ರತಿಷ್ಠೆ ಮತ್ತು ಬ್ರಹ್ಮ ಕುಂಭಾಭಿಷೇಕ ಮತ್ತು ನೇಮೋತ್ಸವವು ಎಪ್ರಿಲ್ 25ರಿಂದ 29ರವರೆಗೆ ನಡೆಯಲಿದೆ.

ಎ.25 ಗುರುವಾರ ಸಂಜೆ 3.30 ಗಂಟೆಗೆ ದೈವಿಕ ಸೊತ್ತುಗಳ ಮೆರವಣಿಗೆ, 4.30ಕ್ಕೆ ಸಾಮೂಹಿಕ ಪ್ರಾರ್ಥನೆ, ಧಾರ್ಮಿಕ ವಿಧಿ ವಿಧಾನ ಆರಂಭ, ಎ.26 ಶುಕ್ರವಾರ ಬೆಳಿಗ್ಗೆ 6.15 ಗಂಟೆಗೆ ಪುನಃಪ್ರತಿಷ್ಠೆ, ಕಲಶಾಭಿಷೇಕ, ಪ್ರಸನ್ನ ಪೂಜೆ, ಪ್ರಸಾದ ವಿತರಣೆ, ಬೆಳಿಗ್ಗೆ 7.30ಕ್ಕೆ ನೂತನ ಮುಕ್ಕಾಲ್ದಿಗೆ ಎಣ್ಣೆ ಕೊಡುವ ಕಾರ್ಯಕ್ರಮ, 10ಗಂಟೆಗೆ ಹೆಜಮಾಡಿ ಆದಿಸ್ಥಳದಿಂದ ಮುಗ್ಗೆರ್ಕಳ ಮತ್ತು ಪರಿವಾರ ದೈವಗಳ ಭಂಡಾರ ಬರುವುದು, ಮಧ್ಯಾಹ್ನ 12.30ರಿಂದ ಮಹಾ ಅನ್ನ ಸಂತರ್ಪಣೆ, ಸಂಜೆ 4.30ರಿಂದ ಸಾಂಸ್ಕøತಿಕ ಮತ್ತು ಧಾರ್ಮಿಕ ಕಾರ್ಯಕ್ರಮ,ದಾನಿಗಳಿಗೆ ಸನ್ಮಾನ, ರಾತ್ರಿ 9 ಗಂಟೆಗೆ ಕೆಮ್ಮಲೆ ಶ್ರೀ ಬ್ರಹ್ಮರ ಉತ್ಸವ ಮತ್ತು ದೈವಗಳಿಗೆ ನೈವೇದ್ಯ(ಅಗೇಲು) ಸಮರ್ಪಣೆ ನಡೆಯಲಿದೆ.ಧಾರ್ಮಿಕ ಸಭೆಯಲ್ಲಿ ಸನ್ನಿಧಿಯ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪ್ರಬೋದ್‍ಚಂದ್ರ ಹೆಜ್ಮಾಡಿ ಅಧ್ಯಕ್ಷತೆ ವಹಿಸಲಿದ್ದು, ಕೊಲಕಾಡಿ ವಾದಿರಾಜ ಉಪಾಧ್ಯಾಯ ಧಾರ್ಮಿಕ ಪ್ರವಚನ ನೀಡಲಿರುವರು.

ಎ.27 ಶನಿವಾರ ರಾತ್ರಿ 8 ಗಂಟೆಗೆ ಶ್ರೀ ಮುಗ್ಗೆರ್ಕಳ ದೈವಗಳ ನೇಮೋತ್ಸವ, 12 ಗಂಟೆಗೆ ಶಕ್ತಿ ಸ್ವರೂಪಿಣಿ ತನ್ನಿಮಾನಿಗ ದೈವದ ನೇಮೋತ್ಸವ, ಎ.28 ಭಾನುವಾರ ಬೆಳಿಗ್ಗೆ 10.30 ಗಂಟೆಗೆ ಗುಳಿಗ ದೈವದ ನೇಮೋತ್ಸವ, ಸಂಜೆ 7 ಗಂಟೆಗೆ ಶ್ರೀ ಧೂಮಾವತಿ ಮತ್ತು ಬಂಟ ದೈವಗಳ ನೇಮೋತ್ಸವ, ಎ.29 ಸೋಮವಾರ ಬೆಳಿಗ್ಗೆ 10 ಗಂಟೆಗೆ ಶ್ರೀ ಕ್ಷೇತ್ರ ಶುದ್ಧೀಕರಣ ಮತ್ತು ಶುದ್ಧ ತಂಬಿಲ ಸೇವೆ ನಡೆಯಲಿದೆ.