ಎಸ್.ಪಿ.ಎಟೇಕರ್ಸ್‍ಗೆ ಬ್ಯಾಡ್ಮಿಂಟನ್ ಬಿಟಿಕೆ ಟ್ರೋಫಿ-2019

ಪಡುಬಿದ್ರಿ: ಇಲ್ಲಿನ ಕಂಚಿನಡ್ಕ ಬ್ಯಾಂಡ್ಮಿಂಟನ್ ಟೀಮ್ ಆಶ್ರಯದಲ್ಲಿ ನಡೆದ ಹೊನಲು ಬೆಳಕಿನ ಐಪಿಎಲ್ ಮಾದರಿಯ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಪವನ್ ಪಾದೆಬೆಟ್ಟು ಮಾಲಿಕತ್ವದ ಎಸ್.ಪಿ.ಎಟೇಕರ್ಸ್ ತಂಡವು ಬಿಟಿಕೆ ಟ್ರೋಫಿ-2019 ಸಹಿತ ನಗದು ರೂ. 55,555 ಪಡೆಯಿತು.

ಕಂಚಿನಡ್ಕದ ಕ್ರೀಡಾಂಗಣದಲ್ಲಿ ಶನಿವಾರ ಸಂಜೆ ಆರಂಭಗೊಂಡ ಲೀಗ್ ಮಾದರಿಯ ಬ್ಯಾಡ್ಮಿಂಟನ್ ಪಂದ್ಯದ ಫೈನಲ್‍ನಲ್ಲಿ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಮಾಲಕತ್ವದ ಸ್ಕಂದ ವಾರಿಯರ್ಸ್ ತಂಡವನ್ನು ರೋಮಾಂಚಕಾರಿಯಾಗಿ 12-15,9-15,15-12,12-15,15-9,15-6 ಒಟ್ಟು 6 ಅಂಕಗಳ ಮುನ್ನಡೆಯೊಂದಿಗೆ ಎಸ್.ಪಿ.ವಾರಿಯರ್ಸ್ ಪ್ರಶಸ್ತಿ ಪಡೆಯಿತು. ಫೈನಲ್‍ನಲ್ಲಿ ಸೋತ ಸ್ಕಂದ ವಾರಿಯರ್ಸ್ ದ್ವಿತೀಯ ಪ್ರಶಸ್ತಿ ಸಹಿತ ನಗದು ರೂ.33,333 ಪಡೆಯಿತು.

ಐದನೇ ಸೆಟ್‍ವರೆಗೂ ಅಲ್ಪ ಅಂಕಗಳ ಮುನ್ನಡೆಯಲ್ಲಿದ್ದ ಸ್ಕಂದ ವಾರಿಯರ್ಸ್ ನಿರ್ಣಾಯಕ ಸೆಟ್‍ನಲ್ಲಿ ನೀರಸವಾಗಿ ಆಡಿದ ಪರಿಣಾಮ ಎಸ್‍ಪಿ ಎಟೇಕರ್ಸ್ ವಿಜಯಿಯಾಯಿತು.

ಪಂದ್ಯಾಟದಲ್ಲಿ ಫೈನಲ್ ಪಂದ್ಯದ ಪಂದ್ಯಶ್ರೇಷ್ಠರಾಗಿ ಎಸ್‍ಪಿ ಎಟೇಕರ್ಸ್‍ನ ನಿನಾದ್, ಬೆಸ್ಟ್ ರಿಸೀವರ್ ಆಗಿ ಸ್ಕಂದ ವಾರಿಯರ್ಸ್‍ನ ಶಶನ್‍ರಾಜ್, ಬೆಸ್ಟ್ ಸ್ಮ್ಯಾಶರ್ ಆಗಿ ಎಸ್‍ಪಿ ಎಟೇಕರ್ಸ್‍ನ ಮನೀಶ್ ಬಜಗೋಳಿ, ಆಲ್‍ರೌಂಡರ್ ಆಟಗಾರರಾಗಿ ಸ್ಕಂದ ವಾರಿಯರ್ಸ್‍ನ ಸಂಜಯ್ ಪಡುಬಿದ್ರಿ ವೈಯಕ್ತಿಕ ಪ್ರಶಸ್ತಿ ಪಡೆದರು.

ಪಡುಬಿದ್ರಿ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ ಅಧ್ಯಕ್ಷ ನವೀನ್‍ಚಂದ್ರ ಜೆ.ಶೆಟ್ಟಿ, ಕಾಪು ಬಿಜೆಪಿ ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಜಿಲ್ಲಾ ಟೆನ್ನಿಸ್‍ಬಾಲ್ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷ ಶರತ್ ಶೆಟ್ಟಿ, ಕಂಚಿನಡ್ಕ ಬ್ಯಾಡ್ಮಿಂಟನ್ ಟೀಮ್ ಮುಖ್ಯಸ್ಥ ಕೃಷ್ಣ ಬಂಗೇರ, ಅಧ್ಯಕ್ಷ ಪದ್ಮನಾಭ ಕಂಚಿನಡ್ಕ, ಲೋಹಿತಾಕ್ಷ ಸುವರ್ಣ, ಸುನಿಲ್ ಶೆಟ್ಟಿ, ತಾರಾನಾಥ ಅಮೀನ್, ಅಣ್ಣು ಕಂಚಿನಡ್ಕ, ನಿಜಾಮುದ್ದೀನ್, ಸುರೇಶ್ ಪಡುಬಿದ್ರಿ, ಹರೀಶ್ ಕಂಚಿನಡ್ಕ, ಶಂಕರ್ ಕಂಚಿನಡ್ಕ, ದಿನೇಶ್ ಪಡುಬಿದ್ರಿ, ಯೋಗೀಶ್ ಪೂಜಾರಿ ವಿಜೇತರಿಗೆ ಪ್ರಶಸ್ತಿ ವಿತರಿಸಿದರು.
ಸಂತೋಷ್ ನಂಬಿಯಾರ್ ಕಾರ್ಯಕ್ರಮ ನಿರ್ವಹಿಸಿದರು.