ಎಸ್‍ಜೆಎಮ್ ಕನ್ನಂಗಾರ್ ರೇಂಜ್ ಪ್ರತಿಭಾ ಸಂಗಮ

ಪಡುಬಿದ್ರಿ: ಇಲ್ಲಿಗೆ ಸಮೀಪದ ಕನ್ನಂಗಾರ್ ರೇಂಜ್ ಪ್ರತಿಭಾ ಸಂಗಮವು ಪಡುಬಿದ್ರಿಯ ಕಂಚಿನಡ್ಕದ ನೂರುಲ್ ಹುದಾ ಮದ್ರಸ ಸಭಾಂಗಣದಲ್ಲಿ ನಡೆಯಿತು.

ಪಡುಬಿದ್ರಿ ಜಮಾಅತ್ ಸಮಿತಿಯ ಕೋಶಾಧಿಕಾರಿ ಡಿ.ಎ.ಅಬ್ದಲ್ ರಹ್ಮಾನ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪ್ರತಿಭಾ ಸಂಗಮದ ಕನ್ವೀನರ್ ಇಬ್ರಾಹಿಂ ನಹೀಮಿ ಮೂಳೂರು ಉದ್ಘಾಟಿಸಿದರು.

ರೇಂಜ್ ವ್ಯಾಪ್ತಿಯ 19 ಮದ್ರಸಗಳ 275ಕ್ಕಿಂತಲೂ ಅಧಿಕ ಮಕ್ಕಳ ಪ್ರತಿಭಾ ಸಂಗಮದಲ್ಲಿ ಭಾಗವಹಿಸಿದ್ದರು. ಅತ್ಯಧಿಕ ಅಂಕಗಳೊಂದಿಗೆ ಉಚ್ಚಿಲದ ಸಯ್ಯದ್ ಅರಭಿ ಮದ್ರಸ ಪ್ರಥಮ ಸ್ಥಾನ ಪಡೆದುಕೊಂಡಿತು. ಮೂಳೂರಿನ ಅಲ್ ಇಹ್ಸಾನ್ ಅಕಾಡೆಮಿ ಮದ್ರಸ ದ್ವಿತೀಯ ಸ್ಥಾನ ಪಡೆದುಕೊಂಡಿತು.
ವೈಯಕ್ತಿಕ ಚಾಂಪಿಯನ್ ಆಗಿ ಸೀನಿಯರ್ ವಿಭಾಗದಲ್ಲಿ ಅಫ್ಝಲ್ ಉಚ್ಚಿಲ, ಜೂನಿಯರ್ ವಿಭಾಗದಲ್ಲಿ ಶಾಹಿದ್ ಅಲ್ ಇಹ್ಸಾನ್ ಕಲಾ ಪ್ರತಿಭೆಗಳಾಗಿ ಮೂಡಿಬಂದರು.

ಸಮಾರೋಪ ಸಮಾರಂಭದಲ್ಲಿ ಕಂಚಿನಡ್ಕ ಜುಮ್ಮಾ ಮಸೀದಿ ಖತೀಬ್ ಲತೀಫ್ ಮದನಿ ಅಧ್ಯಕ್ಷತೆ ವಹಿಸಿದ್ದರು. ಕನ್ನಂಗಾರ್ ರೇಂಜ್ ಪ್ರಧಾನ ಕಾರ್ಯದರ್ಶಿ ಹಮೀದ್ ಮದನಿ ಉದ್ಘಾಟಿಸಿದರು. ಪ್ರತಿಭಾ ಸಂಗಮದ ಅಧ್ಯಕ್ಷ ಮುಹ್ಸಿನ್ ಲತೀಫಿ ಉಪಸ್ಥಿತರಿದ್ದರು. ಕೆ.ಪಿ.ಶರೀಫ್ ಸಖಾಫಿ ಸ್ವಾಗತಿಸಿ ವಂದಿಸಿದರು.