ಎರ್ಮಾಳು ಶ್ರೀ ಚಂದ್ರನಾಥಸ್ವಾಮಿ ಬಸದಿಗೆ ಧರ್ಮಸ್ಥಳದ ಕೊಡುಗೆ

ಪಡುಬಿದ್ರಿ: ಎರ್ಮಾಳು ಶ್ರೀ ಚಂದ್ರನಾಥ ಸ್ವಾಮಿ ಬಸದಿ ನಿರ್ಮಾಣ ಕಾಮಗಾರಿಗೆ ಧರ್ಮಸ್ಥಳದಿಂದ ರೂ. 5 ಲಕ್ಷ ನೀಡಲಾಗಿದೆ.

ಉಡುಪಿ ಪಡುಬಿದ್ರಿ ವಲಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್ ವತಿಯಿಂದ ಎರ್ಮಾಳು ಶ್ರೀ ಚಂದ್ರನಾಥ ಸ್ವಾಮಿ ಬಸದಿ ನಿರ್ಮಾಣ ಯೋಜನೆಗೆ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ರೂ.5 ಲಕ್ಷ ಮಂಜೂರು ಮಾಡಿದ್ದು, ಯೋಜನೆಯ ಕೇಂದ್ರ ಕಛೇರಿಯ ಸಮುದಾಯ ವಿಭಾಗದ ಪ್ರಾದೇಶಿಕ ನಿರ್ದೇಶಕ ಶ್ರೀಹರಿ ಮತ್ತು ಉಡುಪಿ ಜಿಲ್ಲಾ ನಿರ್ದೇಶಕ ಗಣೇಶ್ ಬಿ.ಯವರು ಬಸದಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಅಶೋಕ್‍ರಾಜ್ ಎರ್ಮಾಳುಬೀಡುರವರಿಗೆ ಅದರ ಡಿಡಿಯನ್ನು ಹಸ್ತಾಂತರಿಸಿದರು.

ಈ ಸಂದರ್ಭ ವೈ.ಸುರೇಶ್ ಕುಮಾರ್, ಸುಧೀರ್‍ಕುಮಾರ್ ಇಂದ್ರ, ವೈ.ಜಯಕೀರ್ತಿ, ವಲಯದ ಮೇಲ್ವಿಚಾರಕ ರತ್ನಾಕರ ಕೊಠಾರಿ, ಸೇವಾ ಪ್ರತಿನಿಧಿ ಕಲಾವತಿ, ಒಕ್ಕೂಟದ ಪದ್ಮಾ ಮತ್ತಿತರರು ಉಪಸ್ಥಿತರಿದ್ದರು.