ಎಎಮ್ ರಾಯಲ್ ತಂಡಕ್ಕೆ ಪಡುಬಿದ್ರಿ ಪಿಪಿಎಲ್ ನ್ಯೂ ಇಯರ್ ಟ್ರೋಫಿ

ಎಎಮ್ ರಾಯಲ್ ತಂಡಕ್ಕೆ ಪಡುಬಿದ್ರಿ ಪಿಪಿಎಲ್ ನ್ಯೂ ಇಯರ್ ಟ್ರೋಫಿ

ಪಡುಬಿದ್ರಿಯ ಬೋರ್ಡ್ ಶಾಲಾ ಮೈದಾನದಲ್ಲಿ ನಡೆದ ಪ್ಯಾಪಿರೋಲ್ ಪ್ರಾಯೋಜಿತ ಪಡುಬಿದ್ರಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದಲ್ಲಿ ಬಲಿಷ್ಠ ಎಎಮ್ ರಾಯಲ್ ತಂಡವು ಸವಾಂಗೀಣ ಪ್ರದರ್ಶನದ ಮೂಲಕ ನ್ಯೂ ಇಯರ್ ಟ್ರೋಫಿ-2017ರ ಸಹಿತ ನಗದು ರೂ.30 ಸಾವಿರ ಪಡೆಯಿತು.

ಫೈನಲ್ ಪಂದ್ಯದಲ್ಲಿ ರಾಜಧಾನಿ ಚ್ಯಾಲೆಂಜರ್ಸ್ ವಿರುದ್ಧ 8 ವಿಕೆಟ್‍ಗಳ ವಿಜಯ ದಾಖಲಿಸುವ ಮೂಲಕ ಪ್ರಶಸ್ತಿ ಪಡೆಯಿತು.ರಾಜಧಾನಿ ಚ್ಯಾಲೆಂಜರ್ಸ್ ದ್ವಿತೀಯ ಪ್ರಶಸ್ತಿ ಸಹಿತ ನಗದು ರೂ.20 ಸಾವಿರ ಪಡೆಯಿತು.
ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ರಾಜಧಾನಿ ಚ್ಯಾಲೆಂಜರ್ಸ್ ನಿಗದಿತ 8 ಒವರ್‍ಗಳಲ್ಲಿ ವರುಣ್‍ರವರು ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ 6 ವಿಕೆಟ್ ನಷ್ಟಕ್ಕೆ 60 ರನ್ ಗಳಿಸಲಷ್ಟೇ ಶಕ್ತವಾಯಿತು. ಗುರಿ ಬೆನ್ನತ್ತಿದ ಎಎಮ್ ರಾಯಲ್ ತಂಡದ ಸಿರಾಜ್(18),ಉಮೇಶ್(ಅಜೇಯ 18),ಹನೀಫ್( ಅಜೇಯ 10) ರನ್‍ಗಳ ಮೂಲಕ 4.4 ಒವರ್‍ಗಳಲ್ಲಿ ವಿಜಯ ಪತಾಕೆ ಹಾರಿಸಿತು.
ವೈಯಕ್ತಿಕ ಪ್ರಶಸ್ತಿ:ಅತ್ಯುತ್ತಮ ಬ್ಯಾಟ್ಸ್‍ಮೆನ್ ಪ್ರವೀಣ್ ಅನ್ನಿ(ರಾಜಧಾನಿ ಚ್ಯಾಲೆಂಜರ್ಸ್),ಅತ್ಯುತ್ತಮ ಬೌಲರ್ ಸೂರಜ್ ಚಿನ್ನ(ರಾಜಧಾನಿ ಚ್ಯಾಲೆಂಜರ್ಸ್),ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಹನೀಫ್(ಎಎಮ್ ರಾಯಲ್),ಸರಣಿ ಶ್ರೇಷ್ಠ ವರುಣ್(ಎಎಮ್ ರಾಯಲ್) ವೈಯಕ್ತಿಕ ಪ್ರಶಸ್ತಿ ಪಡೆದರು.

ಅತಿಥಿಗಳಾದ ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್,ಉದ್ಯಮಿ ಹಾಗೂ ಸಮಾಜಸೇವಕ ಸುರೇಶ್ ಶೆಟ್ಟಿ ಗುರ್ಮೆ,ಅವಿಭಜಿತ ದಕ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ,ಜಿಪಂ ಸದಸ್ಯ ಶಶಿಕಂತ್ ಪಡುಬಿದ್ರಿ,ಕಾಪು ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು,ಉದ್ಯಮಿ ಸಂತೋಷ್ ಶೆಟ್ಟಿ ಪಲ್ಲವಿ,ಮೂಲ್ಕಿ ಧನ್ವಂತರಿ ಭವನ್‍ನ ವೆಂಕಟೇಶ್ ಹೆಬ್ಬಾರ್, ಶಂಕರಪುರ ಫ್ರೆಂಡ್ಸ್ ಕ್ಯಾಟರರ್ಸ್‍ನ ನವೀನ್ ಅಮೀನ್,ಉಡುಪಿ ಜಿಲ್ಲಾ ಟೆನ್ನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷ ಶರತ್ ಶೆಟ್ಟಿ,ರೋಟರಿ ಅಧ್ಯಕ್ಷ ರಮೀಜ್ ಹುಸೈನ್,ಕಾಪು ಪ್ರಖಂಡ ಬಜರಂಗದಳ ಸಂಚಾಲಕ ರಾಜೇಶ್ ಕೋಟ್ಯಾನ್,ಮಾಜಿ ಕ್ರಿಕೆಟಿಗ ಹರೀಶ್ ಕುಮಾರ್,ತೀರ್ಪುಗಾರರಾದ ಸುರೇಶ್ ಎರ್ಮಾಳ್,ರಾಜೇಶ್ ಆಚಾರ್ಯ ಮತ್ತು ದೀಪಕ್ ಕಟಪಾಡಿ,ಪ್ರಕಾಶ್ ಕೆರಮ,ಶ್ಯಾಂಸುಂದರ್,ಸಂಘಟಕರಾದ ಸುನಿಲ್ ಶೆಟ್ಟಿ,ಮಧುಸೂದನ್ ಬದಿಯಡ್ಕ,ಆಸಿಫ್ ಪಡುಬಿದ್ರಿ ವಿಜೇತರಿಗೆ ಪ್ರಶಸ್ತಿ ವಿತರಿಸಿದರು.