ಉಮ್ರಾ ಯಾತ್ರಾರ್ಥಿ ಮದೀನದಲ್ಲಿ ಮೃತ್ಯು

ಪಡುಬಿದ್ರಿ: ಉಮ್ರಾಕ್ಕೆ ತೆರಳಿದ್ದ ಪಡುಬಿದ್ರಿ ಮಸೀದಿ ಬಳಿಯ ನಿವಾಸಿ ದಿ. ಬಾವು ಬ್ಯಾರಿಯವರ ಪುತ್ರ ವೈ. ಬಿ. ಅಬೂಬಕ್ಕರ್ (65) ಗುರುವಾರ ರಾತ್ರಿ ನಿಧನರಾಗಿದ್ದಾರೆ.

ನವಂಬರ್ 18ರಂದು ಖಾಸಗಿ ಟೂರ್ ಸಂಸ್ಥೆಯ ಮೂಲಕ ಮಕ್ಕಾ ಯಾತ್ರೆಗೆ ಅಬೂಬಕ್ಕರ್ ಹಾಗೂ ಅವರ ಪತ್ನಿ ತೆರಳಿದ್ದರು. ಉಮ್ರಾ ಮುಗಿಸಿದ ಬಳಿಕ ಅಲ್ಲಿಂದ ಮದೀನಕ್ಕೆ ತೆರಳಿದ್ದರು.

ಭಾನುವಾರ ರಾತ್ರಿ ಅಲ್ಲಿಂದ ಹೊರಟು ಸೋಮವಾರ ಊರಿಗೆ ಮರಳಲಿದ್ದರು. ನಿನ್ನೆ ರಾತ್ರಿ ಉಸಿರಾಟದ ತೊಂದರೆಯಿಂದ ನಿಧನ ಹೊಂದಿದರು. ಅಂತಿಮ ಸಂಸ್ಕಾರ ಮದೀನದಲ್ಲಿ ನಡೆಸುವುದಾಗಿ ಅವರ ಕುಟುಂಬ ಮೂಲಗಳು ತಿಳಿಸಿವೆ. ಇವರಿಗೆ ಪತ್ನಿ, ಇಬ್ಬರು ಗಂಡು ಹಾಗೂ ಮೂವರು ಹೆಣ್ಣು ಮಕ್ಕಳು ಇದ್ದಾರೆ.