ಉಚ್ಚಿಲ ಮಹಾಲಕ್ಷ್ಮೀ ದೇವಳದ ರಥೋತ್ಸವ ಮುಂದೂಡಿಕೆ

ಪಡುಬಿದ್ರಿ: ಕೇಂದ್ರ ಮತ್ತು ರಾಜ್ಯ ಸರಕಾದ ಆದೇಶದ ಮೇರೆಗೆ ಕೋವಿಡ್-19 ವೈರಸನ್ನು ತಡೆಗಟ್ಟುವ ಸಲುವಾಗಿ ಎಪ್ರಿಲ್ 6ರಿಂದ 11ರವರೆಗೆ ನಡೆಯಬೇಕಿದ್ದ ಉಚ್ಚಿಲ ಮಹಾಲಕ್ಷ್ಮೀ ದೇವಳದ ಶ್ರೀಮನ್ಮಹಾರಥೋತ್ಸವ ಹಾಗೂ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ ಎಂದು ದ.ಕ.ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ.ಸಿ.ಕೋಟ್ಯನ್ ಬೆಳ್ಳಂಪಳ್ಳಿ ತಿಳಿಸಿದ್ದಾರೆ.

ಮೂಲ್ಕಿ ಶ್ರೀ ವೆಂಕಟರಮಣ ದೇವಳದ ಬ್ರಹ್ಮರಥೋತ್ಸವ ಮುಂದೂಡಿಕೆ
ಮೂಲ್ಕಿ: ಕೇಂದ್ರ ಹಾಗೂ ರಾಜ್ಯ ಸರಕಾರಗಳ ಆದೇಶದ ಮೇರೆಗೆ ಜಗತ್ತನ್ನೇ ಆವರಿಸಿರುವ ಕೋವಿಡ್-19 ಕೊರೊನಾ ವೈರಾಣುವನ್ನು ತಡೆಗಟ್ಟುವ ಸಲುವಾಗಿ ಇಲ್ಲಿನ ಒಳಲಂಕೆ ಶ್ರೀ ವೆಂಕಟರಮಣ ದೇವಳದಲ್ಲಿ ನಡೆಯಬೇಕಿದ್ದ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ.

ಮಾರ್ಚ್ 28ರಿಂದ ಎಪ್ರಿಲ್ 3 ರವರೆಗೆ ನಡೆಯಬೇಕಿದ್ದ ಬ್ರಹ್ಮರಥೋತ್ಸವ ಕಾರ್ಯಕ್ರಮಗಳು ಮತ್ತು ಎಪ್ರಿಲ್ 8ರಂದು ನಡೆಯಬೇಕಿದ್ದ ಶತಕಲಶ ಸಂಪ್ರೋಕ್ಷಣೆ ಕಾರ್ಯಕ್ರಮಗಳನ್ನು ಅನಿವಾರ್ಯವಾಗಿ ಅನಿರ್ದಿಷ್ಠಾವಧಿವರೆಗೆ ಮುಂದೂಡಲಾಗಿದೆ. ಅಲ್ಲದೆ ಇತರ ಯಾವುದೇ ವಿಶೇಷ ಕಟ್ಟಳೆ ಸೇವೆಗಳನ್ನೂ, ಭಕ್ತರ ಶ್ರೀ ದೇವಳ ಪ್ರವೇಶವನ್ನೂ ಮುಂದಿನ ಪ್ರಕಟಣೆವರೆಗೆ ರದ್ದುಪಡಿಸಲಾಗಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.