ಉಚಿತ ದಂತ ಚಿಕಿತ್ಸಾ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ

ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ,ಹೆಜಮಾಡಿ ಕೋಡಿಯ ನಿಟ್ಟೆ ಮೀನಾಕ್ಷಿ ಹೆಗ್ಡೆ ಆರೋಗ್ಯ ಕೇಂದ್ರ ಮತ್ತು ಗಾಂಧಿನಗರ ಯುವಕ-ಯುವತಿ ವೃಂದದ ಆಶ್ರಯದಲ್ಲಿ ಹೆಜಮಾಡಿಯ ಬ್ರಹ್ಮಶ್ರೀ ನಾರಾಯಣಗುರು ಸಭಾಗೃಹದಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರನ್ನು ಸೊಸೈಟಿಯ ಅಧ್ಯಕ್ಷ ವೈ.ಸುಧೀರ್‍ಕುಮಾರ್ ಉದ್ಘಾಟಿಸಿದರು.ಸೊಸೈಟಿಯ ಕಾರ್ಯನಿರ್ವಹಣಾಧಿಕಾರಿ ನಿಶ್ಮಿತಾ ಪಿ.ಎಚ್.,ನಿರ್ದೇಶಕ ಮಾಧವ ಆಚಾರ್ಯ,ಡಾ.ಶೋನಿತ್,ಡಾ.ಪವನ್,ಗಾಂಧಿನಗರ ಸಂಸ್ಥೆಯ ಅಧ್ಯಕ್ಷ ರವೀಂದ್ರ ಕೋಟ್ಯಾನ್ ಪದಾಧಿಕಾರಿಗಳಾದ ಜಯಕರ್ ಹೆಜ್ಮಾಡಿ,ಶಶಿಕಾಂತ್ ಕೋಟ್ಯಾನ್,ಹೆಜಮಾಡಿ ಗ್ರಾಪಂ ಸದಸ್ಯ ಶಿವರಾಮ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.