ಇನ್ನಾ ಬಗ್ಗರಗುತ್ತು ರಸ್ತೆ ಕಾಂಕ್ರೀಟೀಕರಣಕ್ಕೆ ಗುದ್ದಲಿಪೂಜೆ

ಪಡುಬಿದ್ರಿ: ಪಡುಬಿದ್ರಿ ಸಮೀಪದ ಇನ್ನಾ ಗ್ರಾಮದ ಬಗ್ಗರಗುತ್ತು ರಸ್ತೆ ಕಾಂಕ್ರೀಟಿಕರಣ ಕಾಮಗಾರಿಗೆ ಜಿಪಂ ಸದಸ್ಯೆ ರೇಷ್ಮಾ ಉದಯ ಶೆಟ್ಟಿಯವರು ಗುದ್ದಲಿ ಪೂಜೆ ನೆರವೇರಿಸಿದರು. ಜಿಪಂ ಅನುದಾನ ರೂ.೪.೪೦ಲಕ್ಷವನ್ನು ರೇಷ್ಮಾ ಉದಯ ಶೆಟ್ಟಿಯವರು ಮಂಜೂರುಗೊಳಿಸಿದ್ದರು.

ಇನ್ನಾ ಗ್ರಾಮದ ಬಹು ಪ್ರಸಿದ್ಧ ಪಿಲಿಚಂಡಿ ದೇವಸ್ಥಾನದ ಸಂಪರ್ಕ ರಸ್ತೆಯಾಗಿರುವ ಈ ರಸ್ತೆಗೆ ಬಹು ದಿನಗಳಿಂದ ಕಾಂಕ್ರೀಕರಣದ ಬೇಡಿಕೆಯನ್ನು ಗ್ರಾಮಸ್ಥರು ನೀಡಿದ್ದರು. ಈ ಭಾಗದಲ್ಲಿ ಸುಮಾರು ೨೫ಕ್ಕೂ ಹೆಚ್ಚು ಮನೆಗಳಿದ್ದು ಸಮರ್ಪಕ ರಸ್ತೆ ಇಲ್ಲದೆ ಸಮಸ್ಯೆಯಾಗಿತ್ತು. ಇದೀಗ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಅತ್ಯಗತ್ಯ ಕಾಮಗಾರಿ ನಡೆಸಲು ರೇಷ್ಮಾ ಉದಯ ಶೆಟ್ಟಿಯವರು ಅನುದಾನ ಒದಗಿಸಿದ್ದಾರೆ. ಮುಂದೆ ರಸ್ತೆಯ ಸಂಪೂರ್ಣ ಅಭಿವೃದ್ಧಿಗಾಗಿ ಕಾರ್ಕಳ ಶಾಸಕ ಸುನಿಲ್ ಕುಮಾರ್‌ರವರಿಗೆ ಮನವಿ ಸಲ್ಲಿಸುವುದಾಗಿ ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಗ್ಗರಗುತ್ತಿನಾರ್ ದೇವಿಪ್ರಸಾದ್ ಶೆಟ್ಟಿ, ಮಡ್ಮಣ್‌ಗುತ್ತು ಸುನಿಲ್ ಶೆಟ್ಟಿ, ಸಿ.ಎ.ರಮೇಶ್ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಗಣೇಶ್ ಶೆಟ್ಟಿ, ಸದಾಶಿವ ಶೆಟ್ಟಿ, ಶಕುಂತಳಾ ಶೆಟ್ಟಿ, ಹೀರಾ ಶೆಟ್ಟಿ, ಮೋಹನ್ ಶೆಟ್ಟಿ, ಸುರೇಶ್ ಪೂಜಾರಿ, ರವಿ ಪೂಜಾರಿ, ರಾಮ ಮೂಲ್ಯ, ರಾಘು ಶೆಟ್ಟಿಗಾರ್, ರೇವತಿ ಶೆಟ್ಟಿ, ಉಷಾ ಶೆಟ್ಟಿ, ಶೋಭಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಇನ್ನಾ ಉದಯಕುಮಾರ್ ಶೆಟ್ಟಿ ಸ್ವಾಗತಿಸಿ ಪ್ರಸ್ತಾವಿಸಿದರು. ಕಾಚೂರು ಪ್ರಸಾದ್ ಶೆಟ್ಟಿ ವಂದಿಸಿದರು.