ಇಂಡೋ-ಟಿಬೆಟ್ ಬಾರ್ಡರ್ ಪೋಲೀಸ್ ಪಡೆಯಿಂದ ಪಥ ಸಂಚಲನ

ಪಡುಬಿದ್ರಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಲೋಕಸಭಾ ಚುನಾವಣೆಯ ಭದ್ರತೆಗೆ ನಿಯೋಜನೆಗೊಂಡಿರುವ ಇಂಡೋ-ಟಿಬೆಟ್ ಬಾರ್ಡರ್ ಪೋಲೀಸ್ ಫೋರ್ಸ್‍ನ 88 ಸಿಬ್ಬಂದಿಗಳು ಕಾಪು ವೃತ್ತ ಪೋಲೀಸರೊಂದಿಗೆ ಹೆಜಮಾಡಿ,ಪಡುಬಿದ್ರಿ,ಮೂಳೂರು ಮತ್ತು ಕಾಪುವಿನ ಮುಖ್ಯ ಬೀದಿಗಳಲ್ಲಿ ಪಥಸಂಚಲನ ನಡೆಸಿ ಗಮನ ಸೆಳೆದರು.

ಇಂಡೋ-ಟಿಬೆಟ್ ಬಾರ್ಡರ್ ಫೋರ್ಸ್‍ನ ಅಸಿಸ್ಟೆಂಟ್ ಕಮಾಂಡೆಂಟ್ ಕುಲ್ವಂತ್ ಸಿಂಗ್,ಇನ್ಸ್‍ಪೆಕ್ಟರ್ ಲಕ್ಷ್ಮೀಕಾಂತ್,ಕಾಪು ವೃತ್ತ ನಿರೀಕ್ಷಕ ಶಾಂತಾರಾಮ್,ಕಾಪು ತಾಲೂಕು ದಂಡಾಧಿಕಾರಿ ರಶ್ಮಿ,ವಿಎ ಅರುಣ್ ಕುಮಾರ್,ಪಡುಬಿದ್ರಿ ಪಿಎಸ್‍ಐ ಸತೀಶ್ ಎಮ್‍ಪಿ,ಕಾಪು ಪಿಎಸ್‍ಐ ನವೀನ್ ನಾಯಕ್,ಕ್ರೈಮ್ ಪಿಎಸ್‍ಐ ಜಾನಕಿ,ಶಿರ್ವ ಪಿಎಸ್‍ಐ ಅಬ್ದುಲ್ ಖಾದರ್ ಪಥ ಸಂಚಲನದ ನೇತೃತ್ವ ವಹಿಸಿದ್ದರು.

ಶೀತಲಪ್ರದೇಶದಲ್ಲಿ ನಿತ್ಯ ಸೇವೆ ಸಲ್ಲಿಸಿ ಸುಡು ಬಿಸಿಲಿನ ಕರಾವಳಿಗೆ ಕರ್ತವ್ಯ ನಿಮಿತ್ತ ಆಗಮಿಸಿದ ಇಂಡೋ-ಟಿಬೆಟ್ ಪೋಲೀಸ್ ಫೋರ್ಸ್‍ನ ಸಿಬ್ಬಂದಿಗಳಲ್ಲಿ ಮಾತನಾಡಿಸಿದಾಗ ಇಲ್ಲಿನ ಅತಿ ಉಷ್ಣತೆ ಬಗ್ಗೆ ಸಮಸ್ಯೆಯಾದರೂ ಕರ್ತವ್ಯ ಮುಖ್ಯ ಎಂದರು.ಆದಾಗ್ಯೂ ಕರಾವಳಿಗೆ ಭೇಟಿ ನೀಡಿದ ಸಂದರ್ಭ ಕಡಲ ತೀರವನ್ನೊಮ್ಮೆ ನೋಡಬೇಕೆಂಬ ಬಯಕೆಯನ್ನು ವ್ಯಕ್ತಪಡಿಸಿದ್ದು,ಅವರಿಗೆ ಕಡಲ ತೀರದ ಸೂರ್ಯಾಸ್ತಮಾನದ ದೃಶ್ಯವನ್ನು ತೋರಿಸಲು ಪೋಲೀಸರು ನಿರ್ಧರಿಸಿದ್ದಾರೆ.