ಆಳ್ವಾಸ್ ಮಡಿಲಿಗೆ ಮಂಗಳೂರು ವಿಶ್ವ ವಿದ್ಯಾನಿಲಯ ರೆ.ಎ.ಪತ್ರಾವೊ ಟ್ರೋಫಿ

ಮೂಲ್ಕಿ: ಮಂಗಳೂರು ವಿಶ್ವ ವಿದ್ಯಾನಿಲಯ ದೈಹಿಕ ಶಿಕ್ಷಣ ವಿಭಾಗ ಮತ್ತು ಮೂಲ್ಕಿ ವಿಜಯಾ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ಮೂಲ್ಕಿ ವಿಜಯಾ ಕಾಲೇಜು ಮೈದಾನದಲ್ಲಿ ನಡೆದ ಘನ ರೆ.ಎ.ಪತ್ರಾವೊ ಟ್ರೋಫಿ ಅಂತರ್ ಕಾಲೇಜು ಮಟ್ಟದ ಮಹಿಳೆಯರ ಕಬ್ಬಡ್ಡಿ ಪಂದ್ಯಾಕೂಟದ ಪ್ರಥಮ ಪ್ರಶಸ್ತಿ ಮೂಡಬಿದಿರೆ ಆಳ್ವಾಸ್ ಕಾಲೇಜು ಪಡೆಯಿತು. ಫೈನಲ್‍ನಲ್ಲಿ ಸೋತ ಎಸ್‍ಡಿಎಂ ಉಜಿರೆ ದ್ವ್ವಿತೀಯ ಪ್ರಶಸ್ತಿಯನ್ನು ಗಳಿಸಿತು.

ಸಮಾರೋಪ ಸಮಾರಂಭ: ಕಾರ್ಯಕ್ರಮದ ಮುಖ್ಯ ಅತಿಥಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಎನ್‍ಎಸ್ ಮನೋಹರ ಶೆಟ್ಟಿಯವರು ಮಾತನಾಡಿ ವಿದ್ಯಾರ್ಥಿ ಜೀವನದ ಕ್ರೀಡಾಸ್ಪೂರ್ತಿ ಮುಂದಿನ ದಿನಗಳಲ್ಲಿ ಉಪಯೋಗಕ್ಕೆ ಬರುತ್ತದೆ.ಜೀವನದ ಅಭಿವೃದ್ಧಿಯಲ್ಲಿ ಶಿಕ್ಷಣದೊಂದಿಗೆ ಕ್ರೀಡೆಯೂ ಅವಿಭಾಜ್ಯವಾಗಿದೆ ಎಂದರು.

ಕಾರ್ಯಕ್ರಮದ ಅತಿಥಿ ಮುಂಬೈ ಉದ್ಯಮಿ ಹಾಗೂ ವಿಜಯಾ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಗೌರವ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಮುಂಚೂಣಿಯಲ್ಲಿದ್ದ ಕ್ರೀಡೆಗಳಿಗೆ ವಿದ್ಯಾರ್ಥಿನಿಯರೂ ಭಾಗವಹಿಸಿ ಎಲ್ಲಾ ಕ್ಷೇತ್ರಗಳಲ್ಲಿ ತನ್ನ ಸಾಧನೆಯನ್ನು ಬಿಂಬಿಸುತ್ತಿರುವುದು ಅಭಿನಂದನೀಯವಾಗಿದೆ. ಮೂಲ್ಕಿ ವಿಜಯಾ ಕಾಲೇಜು ವಿದ್ಯಾರ್ಥಿಗಳಿಗೆ ನೀಡುವ ಉನ್ನತ ಗುಣ ಮೌಲ್ಯದ ಶಿಕ್ಷಣದ ಪ್ರಭಾವದಿಂದ ಇಲ್ಲಿನ ವಿದ್ಯಾರ್ಥಿಗಳು ವಿಶ್ವದಾದ್ಯಂತ ಉನ್ನತ ಹುದ್ದೆಗಳನ್ನು ಪಡೆಯಲು ಯಶಸ್ವಿಯಾಗಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪದವಿ ಕಾಲೇಜು ಪ್ರಾಂಶುಪಾಲ ಡಾ.ಕೆ.ನಾರಾಯಣ ಪೂಜಾರಿ ವಹಿಸಿದ್ದರು.ಅತಿಥಿಗಳಾಗಿ ವಿಜಯಾ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಅಶೋಕ್ ಕುಮಾರ್ ಶೆಟ್ಟಿ,ಮಂಗಳೂರು ವಿಶ್ವ ವಿದ್ಯಾನಿಲಯ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಡಾ.ಪ್ರಸನ್ನ ,ವಿಜಯಾ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಸಿದ್ದರಾಮಣ್ಣ ಕೆಎಲ್, ಪದವಿ ಪೂರ್ವ ವಿಭಾಗದ ಕ್ರೀಡಾ ನಿರ್ದೇಶಕ ನವೀನ್ ಎಸ್, ಕ್ರೀಡಾ ಕಾರ್ಯದರ್ಶಿ ನೀರೀಕ್ಷಿತ್ ಉಪಸ್ಥಿತರಿದ್ದರು. ಸುರಕ್ಷಾ ಸ್ವಾಗತಿಸಿದರು.ಸೌಮ್ಯಾ ನಿರೂಪಿಸಿದರು.

ಫಲಿತಾಂಶ:ಪ್ರಥಮ ಹಂತ: ಪ್ರಥಮ: ಮಂಗಳೂರು ವಿಶ್ವವಿದ್ಯಾನಿಲಯ ಕ್ಯಾಂಪಸ್. ದ್ವಿತೀಯ: ಜಿ.ಪಿ.ಜಿಸಿ ವಾಮದಪದವು.ತೃತೀಯ ವಿದ್ಯಾರಶ್ಮಿ ಸರನೂರು.ಚತುರ್ಥ: ವಿಜಯಾ ಕಾಲೇಜು ಮೂಲ್ಕಿ.
ಪ್ರಶಸ್ತಿ ಪಂದ್ಯ: ಪ್ರಥಮ-ಆಳ್ವಾಸ್ ಕಾಲೇಜು ಮೂಡಬಿದಿರೆ, ದ್ವಿತೀಯ-ಎಸ್‍ಡಿಎಂ ಉಜಿರೆ,ತೃತೀಯ-ಆಳ್ವಾಸ್ ಬಿಪಿಇಡಿ,ಚತುರ್ಥ- ಜಿಎಫ್‍ಸಿ ರಥಬೀದಿ ಮಂಗಳೂರು.
ಬೆಸ್ಟ್ ರೈಡರ್-ಪವಿತ್ರಾ ಎಸ್‍ಡಿಎಂ ಉಜಿರೆ. ಬೆಸ್ಟ್ ಡಿಫೆಂಡರ್-ನವ್ಯಾ ಆಳ್ವಾಸ್ ಮೂಡಬಿದಿರೆ. ಬೆಸ್ಟ್ ಆಲ್‍ರೌಂಡರ್-ಸೌಮ್ಯಾ ಆಳ್ವಾಸ್ ಮೂಡಬಿದಿರೆ.