ಆನಂದ ಆರ್.ಪೂಜಾರಿ (Anand R Poojary)

ಆನಂದ ಆರ್.ಪೂಜಾರಿ

ಪಡುಬಿದ್ರಿ: ಇಲ್ಲಿನ ಬೇಂಗ್ರೆ ನಿವಾಸಿ ಆನಂದ ಆರ್.ಪೂಜಾರಿ(62)ಯವರು  ಆಸ್ಟ್ರೇಲಿಯಾದ ಸಿಡ್ನಿಯ ಮಗನ ಮನೆಯಲ್ಲಿ ಹೃದಯಾಘಾತದಿಂದ ನಿಧನರಾದರು.

6 ತಿಂಗಳ ಹಿಂದೆ ಸೊಸೆಯ ಬಾಣಂತಿ ಆರೈಕೆಗಾಗಿ ಪತ್ನಿ ಜತೆ ವಿಸಿಟಿಂಗ್ ವೀಸಾದಲ್ಲಿ ಆಸ್ಟ್ರೇಲಿಯಾಕ್ಕೆ ತೆರಳಿದ್ದ ಅವರು, ಮಗನ ಜತೆ ಮಗುವಿನ ಪಾಸ್‍ಪೋರ್ಟ್ ಮಾಡಿಸಲು ಪಾಸ್‍ಪೋರ್ಟ್ ಕಛೇರಿಗೆ ತೆರಳುವ ಸಂದರ್ಭ ತೀವ್ರ ಹೃದಯಾಘಾತಕ್ಕೊಳಗಾಗಿದ್ದರು.ತಕ್ಷಣ ಆಸ್ಪತೆಗೆ ಸಾಗಿಸಿದರೂ ಫಲಕಾರಿಯಾಗದೆ ಅವರು ಅಸುನೀಗಿದ್ದಾರೆ.

ಮೃತದೇಹವನ್ನು ಪಡುಬಿದ್ರಿ ತರಲು ಪ್ರಕ್ರಿಯೆ ಮುಂದುವರಿದಿದ್ದು,4-5 ದಿನದೊಳಗೆ ಆಗಮಿಸಲಿದೆ.

ಅವರಿಗೆ ಪತ್ನಿ,ಪುತ್ರಿ,2 ಪುತ್ರ,ಸಹೋದರಿ,4 ಸಹೋದರರು ಇದ್ದಾರೆ,

 

News by: HK Hejmady