ಅಯೋಧ್ಯೆ ಸರ್ವೋಚ್ಚ ತೀರ್ಪು- ಅಮೇರಿಕಾ ಕನ್ನಡಿಗರ ಹರ್ಷೋತ್ಸವ

ಜಯ ಜಯ ವಿಜಯೀ ರಘುರಾಮ ನೃತ್ಯ ನಾಟಕ
ಪಡುಬಿದ್ರಿ: ಅಯೋಧ್ಯೆ ರಾಮ ಮಂದಿರ ಕುರಿತಾದ ಸರ್ವೋಚ್ಚ ನ್ಯಾಯಾಲಯದ ತೀರ್ಪು ಹೊರ ಬಂದ ಹಿನ್ನೆಲೆಯಲ್ಲಿ ಕಾಕತಾಳೀಯವಾಗಿ ಅಮೇರಿಕಾ ಕನ್ನಡಿಗರೂ ತಮ್ಮ ಹರ್ಷೋತ್ಸವವನ್ನು ಆಚರಿಸಿಕೊಂಡಿದ್ದಾರೆ.

ನ. 9ರಂದು ಅಮೇರಿಕಾದ ರೆಡ್‍ಪುಡ್‍ಸಿಟಿಯಲ್ಲಿ ಕನ್ನಡದ ಮೇರು ಸಾಹಿತಿ ಪದ್ಮಶ್ರೀ ಡಾ. ಪುತಿನ ಅವರ ಮಗಳು ಅಲಮೇಲು ನಿರ್ದೇಶನದಲ್ಲಿ ಶ್ರೀ ರಾಮ ಪಟ್ಟಾಭಿಷೇಕದ ಕಥೆಯನ್ನೊಳಗೊಂಡ `ಜಯ ಜಯ ವಿಜಯೀ ರಘುರಾಮ’ ನೃತ್ಯ ನಾಟಕವನ್ನು ದಕ್ಷಿಣ ಭಾರತ ಫೈನ್ ಆಟ್ರ್ಸ್ ಮೂಲಕ ಪ್ರಸ್ತುತಪಡಿಸಲಾಯಿತು.

ರಮ್ಯಾ ಪ್ರಸಾದ್ ಅಭಿಜಿತ್ ನೃತ್ಯ ನಿರ್ದೇಶನ, ಚಿನ್ಮಯಿ ಬೆಟ್ಟದಪುರ ಇವರ ಸಹ ನೃತ್ಯ ನಿರ್ದೇಶನ ಮತ್ತು ಶುಭಪ್ರಿಯಾ ಶ್ರೀನಿವಾಸನ್ ಅವರ ಸಂಗೀತ ನಿರ್ದೇಶನದಲ್ಲಿ ಈ ಕಾರ್ಯಕ್ರಮವು ನಡೆಯಿತು.

ಪಡುಬಿದ್ರಿಯ ಭರತನಾಟ್ಯ ವಿದ್ವಾನ್ ಗಣೇಶ್ ವಾಸುದೇವ ಭಟ್ ಹಾಗೂ ಸಹ ನಾಟ್ಯ ಕಲಾವಿದರಾದ ಪ್ರಶಾಂತ್ ನಾವಡ ಪಡುಬಿದ್ರಿ, ನಿನಾದ ಪ್ರಶಾಂತ್ ಮತ್ತಿತರರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಸನಾತನ ಧರ್ಮ ಕೇಂದ್ರದ ಪ್ರಧಾನ ಅರ್ಚಕ ಪಂಡಿತ್ ಕುಮಾರಸ್ವಾಮಿ ಜೋಶಿ ಅವರನ್ನು ಸಮ್ಮಾನಿಸಲಾಯಿತು. ಶ್ರ್ರೀ ರಾಮ ಮಂದಿರ ವ್ಯಾಜ್ಯದ ತೀರ್ಪು ಹೊರ ಬಂದಿದ್ದು ಅದನ್ನು ಹಿಂದೂಗಳಾದ ತಮ್ಮೆಲ್ಲರ ವಿಜಯವೆಂದು ಕುಮಾರಸ್ವಾಮಿ ಜೋಶಿ ಬಣ್ಣಿಸಿದ್ದಾರೆ.