ಅಮೃತ್‍ರಾಜ್ ಪಿ.ಕೋಟ್ಯಾನ್‍ಗೆ ಕರಾಟೆ ಪ್ರಶಸ್ತಿ

ಪಡುಬಿದ್ರಿ: ಹೈದರಾಬಾದ್ ಎಲ್‍ಬಿ ನಗರದ ಸರೂರ್‍ನಗರ್ ಇಂಡೋರ್ ಸ್ಟೇಡಿಯಮ್‍ನಲ್ಲಿ ನಡೆದ 36ನೇ ಬುಡಾಕಾನ್ ಕರಾಟೆ ಡೋ- ಇಂಡಿಯಾ ರಾಷ್ಟ್ರೀಯ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಹೆಜಮಾಡಿಯ ಪಲಿಮಾರು ಅಮೃತ್‍ರಾಜ್ ಪಿ.ಕೋಟ್ಯಾನ್‍ರವರು 45 ಕೆಜಿಯೊಳಗಿನ ವೈಯಕ್ತಿಕ ಕುಮಿಟೆ ವಿಭಾಗದ ಸ್ಪರ್ಧೆಯಲ್ಲಿ ಪ್ರಥಮ,14ರಿಂದ 16 ಹರೆಯದೊಳಗಿನ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.

ಇವರು ಹೆಜಮಾಡಿ-ಪಲಿಮಾರಿನ ಪುಷ್ಪರಾಜ್ ಕೋಟ್ಯಾನ್‍ರವರ ಪುತ್ರ.ಕರಾಟೆ ಗುರು ಅಜಿತ್‍ಕುಮಾರ್ ಹೆಜಮಾಡಿಯವರಿಂದ ತರಬೇತಿ ಪಡೆದಿದ್ದು,ಮೂಲ್ಕಿ ನಾಆಯಣ ಗುರು ಆಂಗ್ಲ ಮಾಧ್ಯಮ ಶಾಲೆಯ 9 ನೇ ತರಗತಿ ವಿದ್ಯಾರ್ಥಿಯಾಗಿದ್ದಾರೆ.