ಅಬಾಕಸ್ ಸ್ಪರ್ಧೆ: ಹೆಜಮಾಡಿ ಕೋಡಿ ವಿದ್ಯಾಪ್ರಸಾರ ವಿದ್ಯಾಮಂದಿರ ಶಾಲೆಯ ರಾಷ್ಟ್ರಮಟ್ಟದ ಸಾಧನೆ

ಪಡುಬಿದ್ರಿ: ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ವತಿಯಿಂದ ಜನವರಿ 12ರಂದು ಚೆನ್ನೈನ ಸೈಂಟ್ ಹೋಮ್ ಹೈ ರಸ್ತೆಯಲ್ಲಿರುವ ಸೈಂಟ್ ಬೀಡ್ಸ್ ಅಡಿಟೋರಿಯಮ್‍ನಲ್ಲಿ ನಡೆದ 15ನೇ ರಾಷ್ಟ್ರ ಮಟ್ಟದ ಅಬಾಕಸ್ ಸ್ಪರ್ಧೆ ಹಾಗೂ 11ನೇ ರಾಷ್ಟ್ರ ಮಟ್ಟದ ಸ್ಪೀಡ್ ಮೆಟಿಕ್ ಸ್ಪರ್ಧೆಯಲ್ಲಿ ಹೆಜಮಾಡಿಕೋಡಿ ವಿದ್ಯಾಪ್ರಸಾರ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಶಾಲಾ ಮಕ್ಕಳು ಅತ್ಯುತ್ತಮ ಸಾಧನೆಗೈದಿದ್ದಾರೆ.

ಶಾಲಾ ಪ್ರಿನ್ಸಿಪಾಲ್ ರಾಜೇಶ್ವರೀ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಶಾಲಾ ವಿದ್ಯಾರ್ಥಿಗಳಾದ ಅನ್ವಿತಾ(ಚಾಂಪಿಯನ್ ಆಫ್ ಚಾಂಪಿಯನ್), ಧ್ಯಾನ್ ಎಸ್.ಕೆ.(ದ್ವಿತೀಯ ಸ್ಥಾನ), ದೀಪಕ್ ಡಿ.(ತೃತೀಯ ಸ್ಥಾನ), ನಫೀಸತು ಝಕಿಯಾ(ತೃತೀಯ), ವೃಷಾಂಕ(ತೃತೀಯ), ಉಮರ್ ಶಹೀರ್(ಐದನೇ ಸ್ಥಾನ), ಸ್ಮøತಿ(ಐದನೇ ಸ್ಥಾನ), ಮುಹಮ್ಮದ್ ಫಝಲ್(ಐದನೇ ಸ್ಥಾನ)ಗಳನ್ನು ಗಳಿಸುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.