ಅಬಾಕಸ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದ ಸಾಧನೆ

ಪಡುಬಿದ್ರಿ ಸಮೀಪದ ಹೆಜಮಾಡಿಕೋಡಿ ವಿದ್ಯಾಪ್ರಸಾರ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಮೈಸೂರಿನಲ್ಲಿ ನಡೆದಿದ್ದ ಅಬಾಕಸ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದ ಸಾಧನೆಯನ್ನು ಗೈದಿದ್ದಾರೆ. ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ವತಿಯಿಂದ ಇತ್ತೀಚೆಗೆ ಮೈಸೂರಿನ ಕುವೆಂಪು ನಗರದಲ್ಲಿನ ಶ್ರೀ ರಾಮ್ ಕಮ್ಯೂನಿಟಿ ಹಾಲ್‍ನಲ್ಲಿ ನಡೆದ 14ನೇ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಈ ಶಾಲಾ ವಿದ್ಯಾರ್ಥಿಗಳು ವಿಕ್ರಮವನ್ನು ಸಾಧಿಸಿದ್ದಾರೆ. ಶಾಲಾ ಪ್ರಾಂಶುಪಾಲೆ ರಾಜೇಶ್ವರೀ ನೇತೃತ್ವದಲ್ಲಿ ಭಾಗವಹಿಸಿದ್ದ ಶಾಲಾ ವಿದ್ಯಾರ್ಥಿಗಳಾದ ಸೃಷ್ಟಿ ಕೆ. ಪುತ್ರನ್ ಪ್ರಥಮ ಸ್ಥಾನ, ಅನನ್ಯ, ಅನ್ವಿತಾ ದ್ವಿತೀಯ ಸ್ಥಾನವನ್ನು, ನಫೀಸತು ಝಕಿಯಾ, ಶ್ರೇಯಾ, ಯಶಸ್ವಿ, ತನಿಷ್ ಎಲ್. ಅಮೀನ್, ದೀಪಕ್ ಡಿ. ಕರ್ಕೇರ ತೃತೀಯ ಸ್ಥಾನವನ್ನು, ಇತರ ಏಳು ವಿದ್ಯಾರ್ಥಿಗಳು ಐದು ಹಾಗೂ ಆರನೇ ಸ್ಥಾನವನ್ನು ಗಳಿಸಿದ್ದಾರೆ.