ಅನಧಿಕೃತವಾಗಿ ಟೆಂಪೋದಲ್ಲಿ ಜನ ಸಾಗಾಟ — ಚೆಕ್‍ಪೋಸ್ಟ್‍ನಲ್ಲಿ ಹಿಂದಕ್ಕೆ ಕಳುಹಿಸಿದ ಪೋಲಿಸರು

ಪಡುಬಿದ್ರಿ: ಸಾಮಾಜಿಕ ಅಂತರ ಮರೆತು ಗೂಡ್ಸ್ ಟೆಂಪೋವೊಂದರಲ್ಲಿ ಕಾರ್ಮಿಕರನ್ನು ಮಂಗಳೂರು ಕಡೆ ಸಾಗಿಸುತ್ತಿದ್ದ ಟೆಂಪೋವನ್ನು ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸುವ ಹೆಜಮಾಡಿ ಚೆಕ್‍ಪೋಸ್ಟ್‍ನಲ್ಲಿ ಪೊಲೀಸರು ತಡೆದು ಮಂಗಳವಾರ ವಾಪಾಸ್ ಕಳುಹಿಸಿದ್ದಾರೆ.

ಕಾಪು ತಾಲೂಕಿನ ಕುತ್ಯಾರಿನಿಂದ ಮಂಗಳೂರು ರೈಲ್ವೆ ನಿಲ್ದಾಣಕ್ಕೆ ಹೊರಟಿದ್ದ ಕೊಲ್ಕತ್ತಾ ಮೂಲದ 13 ಕಾರ್ಮಿಕರನ್ನು ಗೂಡ್ಸ್ ಟೆಂಪೋದಲ್ಲಿ ತುಂಬಿಸಿಕೊಂಡು ಚೆಕ್‍ಪೋಸ್ಟ್ ಬಳಿ ಬಂದಾಗ ಪೊಲೀಸರ ಗಮನಕ್ಕೆ ಬಂದು ಅವರನ್ನು ತಡೆದರು. ಅಂತರ್‍ರಾಜ್ಯ ಸಂಚಾರದ ಪಾಸ್ ಇಲ್ಲದೆ ಸಾಮಾಜಿಕ ಅಂತರವಿಲ್ಲದೆ ಕುರಿಗಳ ಹಾಗೆ ಅವರನ್ನು ಕರೆ ತಂದ ವ್ಯಕ್ತಿ ಹಾಗೂ ಟೆಂಪೋ ಚಾಲಕನನ್ನು ತರಾಟೆಗೆ ತೆಗೆದುಕೊಂಡ ಚೆಕ್‍ಪೋಸ್ಟ್ ಅಧಿಕಾರಿ ಕಾವೂರು ಠಾಣಾ ಪಿಎಸ್‍ಐ ಪ್ರತಿಮಾರವರು ಅವರನ್ನು ಹಿಂದಕ್ಕೆ ಕಳುಹಿಸಿದರು.